ಇಂದಿನಿಂದ ಹಲವೆಡೆ ವಿದ್ಯುತ್ ವ್ಯತ್ಯಯ

7

ಇಂದಿನಿಂದ ಹಲವೆಡೆ ವಿದ್ಯುತ್ ವ್ಯತ್ಯಯ

Published:
Updated:

ಬೆಂಗಳೂರು:  ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಫೆಬ್ರುವರಿ 2, 3 ಮತ್ತು 4 ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ  ತುರ್ತು ದುರಸ್ತಿ ಕಾರ್ಯ ಇರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಗ್ರಾಫೈಟ್ ರಸ್ತೆ, ವಿಶ್ವೇಶ್ವರಯ್ಯ ಕೈಗಾರಿಕಾ ನಗರ,  ಹೇಮಕುಂಡ ರಸ್ತೆ, ದೇವಸ್ಥಾನ ಕೈಗಾರಿಕಾ ನಗರ, ದೂರವಾಣಿ ಕೇಬಲ್ ರಸ್ತೆ, ಕಾವೇರಿ ನಗರ, ಜಿ.ಸಿ.ಪಾಳ್ಯ, ಆರ್.ಎಚ್.ಬಿ. ಕಾಲೋನಿ, ಸರಸ್ವತಿ ನಗರ, ಮಹೇಶ್ವರಿ ನಗರ, ಎಂ.ಡಿ. ಪುರ ಬಂಡೆ, ಟೆಸ್ಕೋ ಕಂಪೆನಿ, ಇಪಿಐ ಲೇ ಔಟ್, ಇಪಿಐಪಿ ಲೇ ಔಟ್, ಹೂಡಿ, ಗ್ರಾಫೈಟ್ ರಸ್ತೆಯ ಎಡಭಾಗ, ಎಲ್ ಅಂಡ್ ಟಿ, ಭೂರೂಕಾ ಟೆಕ್ ಪಾರ್ಕ್, ಬೆಲ್ ಟವರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು  ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry