ಇಂದಿನಿಂದ 24ರವರೆಗೆ ನವರಾತ್ರಿ ಉತ್ಸವ

7

ಇಂದಿನಿಂದ 24ರವರೆಗೆ ನವರಾತ್ರಿ ಉತ್ಸವ

Published:
Updated:

ರಾಯಚೂರು: ಇಲ್ಲಿನ ಬ್ರೇಸ್ತವಾರಪೇಟೆಯ ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿಯು 41ನೇ ದಸರಾ ನವರಾತ್ರಿ ಉತ್ಸವ ಅಂಗವಾಗಿ ಇದೇ 16ರಿಂದ 24ರವರೆಗೆ ವಿಶೇಷ ಪೂಜೆ, ಹೋಮ, ರಥೋತ್ಸವ, ಪದ್ಮಾವತಿ-ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.16ರಂದು ಸೂರ್ಯವಾಹನ, 17ರಂದು ಆದಿಶೇಷವಾಹನ, 18ರಂದು ಸಿಂಹವಾಹನ, 19ರಂದು ಗರುಡವಾಹನ, 20ರಂದು ಪವಮಾನ ಹೋಮ ಹಾಗೂ ಅಂಜನೇಯ ವಾಹನ ಉತ್ಸವ ನಡೆಯಲಿದೆ. 21ರಂದು ಕಾಮಧೇನು ಕಲ್ಪವೃಕ್ಷವಾಹನ ಹಾಗೂ ಕಳಸಗಳ ಸಂಗಡ ದೀರ್ಘದಂಡ ನಮಸ್ಕಾರ  ನಡೆಯಲಿದೆ. 22ರಂದು ಚಂದ್ರವಾಹನ ಹಾಗೂ ಉಚ್ಚಾಯ ಸೇವೆ ನೆರವೇರಲಿದೆ. 

23ರಂದು ಗಜವಾಹನ ಮತ್ತು ಅಶ್ವವಾಹನ ಹಾಗೂ ರಥೋತ್ಸವ ನಡೆಯಲಿದೆ. ನಂತರ ದೇವರ ಪುಷ್ಪಮಾಲೆ, ಮುತ್ತಿನ ಹಾರ ಹರಾಜು ನಡೆಸಲಾಗುತ್ತದೆ. 24ರಂದು ಮುಂಜಾನೆ 9ರಿಂದ ಶ್ರೀ ಪದ್ಮಾವತಿ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಅದೇ ದಿನ ಸಂಜೆ 5ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಜೂಕೂರು ವೀರಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಆದಿರಾಜ ಆದೋನಿ ಅವರು ಪ್ರಕಟಣೆಯಲ್ಲಿ    ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry