ಇಂದಿನ ವರ್ಣನೆಗಳು ಗತವೈಭವದ ಶವಾರಾಧನೆ

7

ಇಂದಿನ ವರ್ಣನೆಗಳು ಗತವೈಭವದ ಶವಾರಾಧನೆ

Published:
Updated:

ಮೈಸೂರು: ನಮ್ಮ ಪೂರ್ವಿಕರು ಹಾಗಿದ್ದರು, ಹೀಗಿದ್ದರು... ದೇಶ ಸಂಪದ್ಭರಿತವಾಗಿತ್ತು... ಹೀಗೆಲ್ಲ ಉತ್ಪ್ರೇಕ್ಷೆಗಳ ಸುರಿಮಳೆಗೈಯ್ಯುತ್ತಾ ಇಂದು ಗತ ವೈಭವದ ಶವದ ಆರಾಧನೆ ಮಾಡಲಾಗುತ್ತಿದೆ ಎಂದು ಸಾಹಿತಿ ಡಾ.ಪ್ರಭುಶಂಕರ ಅಭಿಪ್ರಾಯಪಟ್ಟರು.ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ `ಕನ್ನಡ ಕ್ರಿಯಾ ವೇದಿಕೆ~ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗತಕಾಲದ ವಿಷಯ ವರ್ಣನೆ ಇಂದು ಅತೀತವಾಗಿದೆ. ಆದರೆ ವಾಸ್ತವದಲ್ಲಿ ಇದಾವುದೂ ಸತ್ಯವಲ್ಲ.  ಚೈತನ್ಯ ತುಂಬಲು ಹೇಳಲಾಗುತ್ತದೆ. ಜಗತ್ತಿನಲ್ಲಿ ಅತ್ಯಂತ ಅಧೋಗತಿಗಿಳಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಸುಮಾರು 300 ವರ್ಷಗಳವರೆಗೆ ಈ ದೇಶ ಪರಕೀಯರ ದಾಸ್ಯದಲ್ಲಿತ್ತು. ವಿವಿಧ ದೇಶಗಳವರು ಇಲ್ಲಿ ರಾಜ್ಯಭಾರ ಮಾಡಿದ್ದಾರೆ. ಗಾಂಧೀಜಿಯವರಂಥ ಮಹಾನ್ ನಾಯಕರು ಅವತರಿಸಿ ಹೋರಾಡದಿದ್ದರೆ ಈ ನಾಡು ಇಂದಿಗೂ ಗುಲಾಮಗಿರಿಯಲ್ಲಿ ಇರಬೇಕಾದ ಸ್ಥಿತಿ ಇರುತ್ತಿತ್ತೇನೋ? ಇತಿಹಾಸವೇ ಇಲ್ಲದ ಅಮೆರಿಕ ವಿಶ್ವದ ಮೂಲೆ ಮೂಲೆ ಯಲ್ಲೂ ಜಗಮಗಿಸುತ್ತಿದೆ ಎಂದರು.ಕುವೆಂಪು ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ ಸೌಭಾಗ್ಯ ನನ್ನದು. ಅದೊಂದು ದಿನ ಕುವೆಂಪು ನಗರ ತೋರಿಸುವುದಾಗಿ ಕುವೆಂಪು ಅವರನ್ನು ಮನೆಗೆ ಆಹ್ವಾನಿಸಿದ್ದೆ.  ಕುವೆಂಪುನಗರ ಪ್ರದಕ್ಷಿಣೆ ಹಾಕಿದ ಅವರು ಆನಂದ ಗೊಂಡರು. ರಾಷ್ಟ್ರಕವಿಯ ಪಾದಧೂಳಿ ಯನ್ನು ಈ ನಗರ ಸ್ಪರ್ಶಿಸಿದೆ ಎಂದು ತಿಳಿಸಿದರು.ಲೇಖಕಿ ಡಾ. ಪದ್ಮಾಶೇಖರ್ ಮಾತನಾಡಿ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳು ಕನ್ನಡದ ಬಗ್ಗೆ ಗೊಂದಲ ಸೃಷ್ಟಿಸಿವೆ. ಈ ಮೀಡಿಯಂ ಗಳಲ್ಲಿ ಕಲಿತ ವಿದ್ಯಾರ್ಥಿಗಳು ಮುಖಾ ಮುಖಿಯಾದಾಗ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕೀಳರಿಮೆ ಮನೆ ಮಾಡು ತ್ತದೆ. ಇಂಗ್ಲಿಷ್‌ಗೆ  ಪ್ರಾಧಾನ್ಯತೆ ನೀಡು ತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.ಪತ್ರಕರ್ತ ರವೀಂದ್ರ ಭಟ್ಟ ಮಾತ ನಾಡಿದರು. ಪ್ರಾಂಶುಪಾಲರಾದ ಡಾ.ಇಂದಿರಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕೆ.ಎಲ್.ವಿಶ್ವನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry