ಇಂದಿರಾ ಗೋಸ್ವಾಮಿ ಗಂಭೀರ

7

ಇಂದಿರಾ ಗೋಸ್ವಾಮಿ ಗಂಭೀರ

Published:
Updated:

ಗುವಾಹಟಿ (ಪಿಟಿಐ): ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಸ್ಸಾಮಿ ಸಾಹಿತಿ ಮತ್ತು ನಿಷೇಧಿತ ಉಲ್ಫಾ  ಹಾಗೂ ಕೇಂದ್ರದ ನಡುವೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದ್ದ ಇಂದಿರಾ ರಾಯ್‌ಸೊಮ್ ಗೋಸ್ವಾಮಿ (68) ಅನಾರೋಗ್ಯ ಪೀಡಿತರಾಗಿದ್ದು ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ಸೇರಿಸಿದ್ದು ಅವರಿಗೆ ಕೃತಕ ಉಸಿರಾಟ ಸಾಧನ ಅಳವಡಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪೂರ್ಣ ಹೊರಬಂದಿಲ್ಲ’  ಎಂದು ವೈದ್ಯರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry