ಇಂದು ಅಪ್ಪು ವೆಂಕಟೇಶ್ ಡೇ!

7

ಇಂದು ಅಪ್ಪು ವೆಂಕಟೇಶ್ ಡೇ!

Published:
Updated:

ಅದೊಂದು ದಿನ ರಾಜ್‌ಕುಮಾರ್ ಎದುರು ಕಣ್ಣೀರಿಟ್ಟಾಗ, ‘ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುವೆ’ ಎಂದು ಅವರು ಆಶೀರ್ವದಿಸಿದ್ದರು. ತಮ್ಮನ್ನು ಅದೇ ಕಾಪಾಡಬೇಕು ಎನ್ನುತ್ತಾ ಅಪ್ಪು ವೆಂಕಟೇಶ್ ಭಾವುಕರಾದರು. ಅವರ ಅಭಿನಯದ ‘1ಡೇ’ ಚಿತ್ರ ಈ ವಾರ ತೆರೆಕಾಣುತ್ತಿದೆ.ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕರಿಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ತರಬೇತಿ ನೀಡಿರುವ ವೆಂಕಟೇಶ್ ಖುದ್ದು ‘ಸಿಕ್ಸ್ ಪ್ಯಾಕ್’ ದೇಹ ಇರುವ ವ್ಯಕ್ತಿ. ನಿರ್ಮಾಪಕ ಕೃಷ್ಣಸ್ವಾಮಿ ಮನಸ್ಸು ಮಾಡಿರುವುದರಿಂದ ಅವರಿಗೆ ನಾಯಕನಾಗುವ ಅವಕಾಶ ಸಿಕ್ಕಿದ್ದು. ಈ ಮೊದಲು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಅನುಭವ ಪಡೆದುಕೊಂಡಿರುವ ಅವರಿಗೆ ಈಗ ಜನರಿಂದ ಹೇಗೆ ಪ್ರತಿಕ್ರಿಯೆ ಸಿಕ್ಕೀತೆಂಬ ಕುತೂಹಲ.ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಘಟನಾವಳಿಗಳನ್ನಿಟ್ಟುಕೊಂಡು ‘1ಡೇ’ ಸಿದ್ಧಗೊಂಡಿದೆ. ಚಿತ್ರದ ನಿರ್ದೇಶಕ ನವೀನ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೂ ಅವರದ್ದೇ. ವಿಜಯ ಭಾರತಿ ಸಂಗೀತ ಸಂಯೋಜನೆ ಮಾಡಿದ್ದು, ಮಹೇಶ್ ಕ್ಯಾಮೆರಾ ಚಳಕ ತೋರಿದ್ದಾರೆ. ಪ್ರಿಯಾ, ಮೋಹನ್‌ಜುನೇಜಾ, ಬಿರಾದರ್ ಮುಂತಾದವರು ತಾರಾಗಣದಲ್ಲಿದ್ದಾರೆ.ಕಷ್ಟದ ಸಾಹಸಗಳನ್ನು ವೆಂಕಟೇಶ್ ನಿಭಾಯಿಸಿರುವ ರೀತಿಯನ್ನು ಡಿಫರೆಂಟ್ ಡ್ಯಾನಿ ಬಣ್ಣಿಸಿದರು. ಒಂದೇ ದಿನದಲ್ಲಿ ನಾಯಕನೊಬ್ಬ ದೊಡ್ಡ ಗುರಿಯನ್ನು ಹೇಗೆ ಸಾಧಿಸುತ್ತಾನೆ ಎಂಬ ಕಥೆಯನ್ನು ‘1ಡೇ’ ಹೇಳುತ್ತದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry