ಇಂದು ಎಎಪಿ ವಿಶ್ವಾಸಮತ ಯಾಚನೆ

7

ಇಂದು ಎಎಪಿ ವಿಶ್ವಾಸಮತ ಯಾಚನೆ

Published:
Updated:

ನವದೆಹಲಿ (ಪಿಟಿಐ): ದೆಹಲಿ ವಿಧಾನ­ಸಭೆಯ ಮೊದಲ ಅಧಿವೇಶನ ಬುಧ­ವಾರ ಆರಂಭವಾಯಿತು. ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ) ಗುರು­­ವಾರ ವಿಶ್ವಾಸಮತ ಯಾಚಿಸಲಿದೆ.ಅಧಿವೇಶನದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿ­ದರು. ನಂತರ ಅವರ ಸಚಿವ ಸಂಪು­ಟದ ಸಹೋದ್ಯೋಗಿಗಳಾದ ಮನೀಶ್‌ ಸಿಸೊಡಿಯಾ ಸೇರಿದಂತೆ ಇತರರು ಪ್ರಮಾಣವಚನ ಸ್ವೀಕರಿಸಿದರು. ನೂತನ ಶಾಸಕರಿಗೆ ಹಂಗಾಮಿ ಸಭಾ­ಧ್ಯಕ್ಷ ಕಾಂಗ್ರೆಸ್‌ನ ಮತೀನ್‌ ಅಹ್ಮದ್‌ ಅವರು ಪ್ರಮಾಣ­ವಚನ ಬೋಧಿ­ಸಿ­ದರು. ವಿಧಾನಸಭೆ ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷ ಸ್ಥಾನಕ್ಕೆ ಜನವರಿ 3ರಂದು ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry