ಭಾನುವಾರ, ಮೇ 9, 2021
27 °C

ಇಂದು ಎಐಟಿಯುಸಿ ತಾಲ್ಲೂಕು ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಎಐಟಿಯುಸಿ ತಾಲ್ಲೂಕು ಸಮ್ಮೇಳನ ಸೆ. 24ರಂದು ನಗರದ ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಪ್ರತಿನಿಧಿಗಳ ಸಮಾವೇಶ ನಡೆಯುವುದು. ಈಗಾಗಲೇ ಸಾಮೂಹಿಕ ಸಂಘಟನೆಗಳಿಗೆ ತಿಳಿಸಿದಂತೆ, ಆಯಾ ಸಂಘಟನೆಗಳಿಂದ ಪ್ರತಿನಿಧಿಗಳನ್ನು ಬರಮಾಡಬೇಕು ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ರಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಉಚಿತ ಯೋಗ ಶಿಬಿರ

ಅಕ್ಷಯ ಯೋಗ ಕೇಂದ್ರದ ವತಿಯಿಂದ ನಗರದ ಶ್ರೀಕೃಷ್ಣ ಭವಾನಿ ಕಲ್ಯಾಣ ಮಂಟಪದಲ್ಲಿ ಸೆ. 26ರಿಂದ ಅ. 26ರವರೆಗೆ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಬೆಳಿಗ್ಗೆ 5.50ರಿಂದ 7ರವರೆಗೆ ಸೂಕ್ಷ್ಮ, ಸ್ಥೂಲ, ಆಸನ, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ ಯೋಗ ಪದ್ಧತಿ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ ಮೊ: 96200 24076ಗೆ ಸಂಪರ್ಕಿಸಬಹುದು.ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ

ನಗರದಲ್ಲಿನ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಏರ್ಪಡಿಸಲಾಗಿದೆ.2010-11ನೇ ಸಾಲಿನ ಶೈಕ್ಷಣಿಕ ವರ್ಷದ ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ಕಾಲೇಜುಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಎಂಜಿನಿಯರಿಂಗ್ ಇತ್ಯಾದಿ ಕೋರ್ಸ್‌ಗಳ ಅಂತಿಮ ವರ್ಷದಲ್ಲಿ ಹೆಚ್ಚು ಅಂಕಗಳಿಸಿ ರ‌್ಯಾಂಕ್ ಪಡೆದಿರಬೇಕು. ಅಂಕಪಟ್ಟಿ ಜೆರಾಕ್ಸ್ ಪ್ರತಿಯೊಂದಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್: 96636 21616ಗೆ ಸಂಪರ್ಕಿಸಬಹುದು.ಸಮಿತಿ ಪದಾಧಿಕಾರಿಗಳ ಆಯ್ಕೆ

ಭ್ರಷ್ಟಾಚಾರ ತಡೆ ಜನಾಂದೋಲನ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಎಂ.ಎಸ್.ಕೆ. ಶಾಸ್ತ್ರಿ (ಅಧ್ಯಕ್ಷ), ಕೆ.ಜಿ. ಶರಣಪ್ಪ, ಎಂ. ಪ್ರೇಮಲತಾ (ಗೌರವಾಧ್ಯಕ್ಷರು), ಅರುಣ್ ಕುಮಾರ್ ಕುರುಡಿ, ಚಂದ್ರಶೇಖರ ದಾನಪ್ಪ (ಉಪಾಧ್ಯಕ್ಷರು), ಮಂಜಪ್ಪ ಹಲಗೇರಿ (ಪ್ರಧಾನ ಕಾರ್ಯದರ್ಶಿ), ಡಿ.ಟಿ. ಸುಧೀಂದ್ರ ಕುಮಾರ್, ಎಸ್.ಎನ್. ಮಹೇಶ್ ರೆಡ್ಡಿ (ಸಂಘಟನಾ ಕಾರ್ಯದರ್ಶಿ).ಕೆ.ಪಿ. ಶಿವಣ್ಣ, ಎಂ.ಡಿ. ರವಿ, ರಿಯಾಜ್ ಅಹಮ್ಮದ್, ಡಿ.ಆರ್. ಸಂಜೀವ್ ರೆಡ್ಡಿ, ಬಿ.ವೈ. ಪರಮೇಶ್ವರಪ್ಪ (ಕಾರ್ಯದರ್ಶಿಗಳು). ಬಲ್ಲೂರು ರವಿಕುಮಾರ್, ಮಹಮ್ಮದ್ ಗೌಸ್, ಎನ್.ಎಂ. ಗಿರೀಶ್, ಗುರಪಾದಯ್ಯ ಮಠದ್ (ಕಾರ್ಯಕಾರಿ ಸಮಿತಿ ಸದಸ್ಯರು) ಎಂದು ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.