ಇಂದು ಐಐಎಸ್ಸಿ ಕೇಂದ್ರ ಉದ್ಘಾಟನೆ

7

ಇಂದು ಐಐಎಸ್ಸಿ ಕೇಂದ್ರ ಉದ್ಘಾಟನೆ

Published:
Updated:
ಇಂದು ಐಐಎಸ್ಸಿ ಕೇಂದ್ರ ಉದ್ಘಾಟನೆ

ನಾಯಕನಹಟ್ಟಿ: ಇಲ್ಲಿಗೆ ಸಮೀಪದ ಕುದಾಪುರ ಮೊದಲು ರಾಜ್ಯದಲ್ಲೇ ಪ್ರಸಿದ್ಧವಾದ ವಿಶಾಲವಾದ ಕುರಿ ಸಂವರ್ಧನಾ ಕೇಂದ್ರಕ್ಕೆ ಹೆಸರುವಾಸಿಯಾಗಿತ್ತು. ಆದರೆ, ಇಂದು ದೇಶದ ವೈಜ್ಞಾನಿಕ ನಕಾಶೆಯಲ್ಲಿ ಅಧಿಕೃತವಾಗಿ ತನ್ನ ಛಾಪನ್ನು ಮೂಡಿಸಲಿದೆ. ಕುದಾಪುರ ಕ್ಯಾಂಪಸ್‌ನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಎರಡನೇ ಕೇಂದ್ರದ ಪ್ರತಿಭಾ ವಿಕಾಸ ಕೇಂದ್ರದ ಉದ್ಘಾಟನಾ ಫೆ. 26ರಂದು ನಡೆಯಲಿದೆ.ಅಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರವನ್ನು ಉದ್ಘಾಟಿಸಿ ನಾಡಿಗೆ ಸಮರ್ಪಿಸಲಿದ್ದಾರೆ.ಕೌಶಲ ಅಭಿವೃದ್ಧಿ ಕೇಂದ್ರ: ಇಲ್ಲಿ ಸುಸಜ್ಜಿತ ತರಬೇತಿ ಕೇಂದ್ರ ತಲೆಯೆತ್ತಿದೆ. ರಾಜ್ಯದ ಸರ್ಕಾರಿ, ಅನುದಾನಿತ ಪ್ರೌಢಶಾಲೆಯ 5 ಸಾವಿರ ವಿಜ್ಞಾನ ಶಿಕ್ಷಕರಿಗೆ ತರಬೇತಿಯನ್ನು ಈಕೇಂದ್ರದಲ್ಲಿ ನೀಡಲಾಗುತ್ತಿದೆ. ಮೊದಲು ಜಿಲ್ಲೆಯ ನೂರು ಶಿಕ್ಷಕರಿಗೆ ವೈಜ್ಞಾನಿಕ ವಿಷಯದಲ್ಲಿ ಅಭಿವೃದ್ಧಿ ಹೊಂದಲು 10 ದಿನಗಳ ಕಾಲ ನುರಿತ 25 ಜನ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನೀಡಲಿದ್ದಾರೆ ಎಂದು ಪ್ರೊ.ಹೆಗಡೆ ತಿಳಿಸಿದರು.ವಸತಿ ಮುಂತಾದ ಮೂಲ ಸೌಕರ್ಯಗಳು ಸಿದ್ಧವಾಗಿವೆ. 32 ವಸತಿ ಗೃಹಗಳ ದುರಸ್ತಿ ಕಾಮಗಾರಿ ಈಗಾಲೇ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ,  ವಿಧಾನ ಪರಿಷತ್ ಮುಖ್ಯ ಸಚೇತಕರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ. ಮಹಲಿಂಗಪ್ಪ, ಸಂಸದ ಜನಾರ್ದನಸ್ವಾಮಿ,ಶಾಸಕ ತಿಪ್ಪೇಸ್ವಾಮಿ, ಎಂ. ಚಂದ್ರಪ್ಪ, ಎಸ್.ಕೆ. ಬಸವರಾಜನ್, ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ,  ವೈ.ಎ. ನಾರಾಯಣಸ್ವಾಮಿ, ಜಿಲ್ಲಾ ಪಂಚಾಯ್ತಿಉಪಾಧ್ಯಕ್ಷೆ ವಿಜಯಮ್ಮ, ಇಸ್ರೋ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಮಾಹಿತಿ ತಂತ್ರಜ್ಞಾನ ಐ.ಟಿ, ಬಿ.ಟಿ ಇಲಾಖೆ ಕಾರ್ಯದರ್ಶಿ ಅಶೋಕ್‌ಕುಮಾರ್ ಮನೋಳಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿ ಜಿ. ಕುಮಾರ ನಾಯಕ, ಡಿಆರ್‌ಡಿಒ ನಿರ್ದೇಶಕ ಪಿ.ಎಸ್. ಕೃಷ್ಣನ್, ಮಾಜಿ ಸಂಸದ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಪಿ. ಬಲರಾಮ್ ಪಾಲ್ಗೊಳ್ಳುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry