ಭಾನುವಾರ, ಮೇ 16, 2021
21 °C

ಇಂದು ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ: ಸವದತ್ತಿ ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 14ರಂದು ನಡೆಯಲಿದ್ದು, ಸಮ್ಮೇಳನಕ್ಕೆ ಪಟ್ಟಣವೇ ಸಿಂಗಾರವಾಗಿ ಸಜ್ಜುಗೊಂಡಿದೆ.

14ರ ಮುಂಜಾನೆ 8-30ಕ್ಕೆ ತಹಶೀಲ್ದಾರ ದೊಡ್ಡನಗೌಡ ಪಾಟೀಲ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ ಪರಿಷತ್ತಿನ ಧ್ವಜಾರೋಹಣ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿ.ಬಿ ನರಗುಂದ  ನಾಡ ಧ್ವಜಾರೋಹಣ ನೆರವೇರಿಸುವರು.

9 ಗಂಟೆಗೆ ಕನ್ನಡಾಂಬೆ ಶ್ರಿ ಭುವನೇಶ್ವರಿಯ ಮೆರವಣಿಗೆಯನ್ನು ಹಿರಿಯ ವಕೀಲ ವಿ.ಆರ್. ಕಾರದಗಿ ಉದ್ಘಾಟಿ ಸಲಿದ್ದಾರೆ. ಮೆರವಣಿಗೆ ನಗರದ ಪ್ರಮುಖ ಬೀದಿಯಲ್ಲಿ ಹಾಯ್ದು ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ ವೇದಿಕೆಗೆ ತಲುಪಿ, 10-30ಕ್ಕೆ ಹೂಲಿ ಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದ ಸಾನಿಧ್ಯವನ್ನು ಸ್ವಾದಿಮಠದ ಶಿವಬಸವಸ್ವಾಮೀಜಿ, ಮುನವಳ್ಳಿಯ ಮುರಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ.

ಶಾಸಕ ಆನಂದ ಮಾಮನಿ ಉದ್ಘಾಟಿಸುವರು, ಅಧ್ಯಕ್ಷತೆ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ವಿ.ಬಿ ನರಗುಂದ ವಹಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲರು ಆಶಯ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಸುರೇಶ ಹಾರೋಬಿಡಿ, ಮಹಾದೇವಪ್ಪ ನೀಲಪ್ಪನವರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ, ಶಿವಾನಂದ ಹೂಗಾರ, ಬಸವರಾಜ ಕಾರದಗಿ ಉಸ್ಥಿತರಿರುವರು.

ಕೃತಿ ಬಿಡುಗಡೆ : ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ವೈ.ಎಂ. ಯಾಕೊಳ್ಳಿ ಅವರ ವಿಮರ್ಶಾ ಸಂಕಲನ `ಒರ್ತೆ', ವೈ.ಬಿ. ಕಡಕೊಳ ಅವರ ಮಕ್ಕಳ ಸಂಕಲನ `ಸಂಸ್ಕಾರ ಫಲ', ನಾಗೇಶ ನಾಯಕ ಅವರ ಅಂಕಣ ಬರಹ `ಪ್ರೀತಿಯಿಂದ ಪ್ರೀತಿಗೆ', ಮಹಾದೇವ ಅರಿಬೆಂಚಿ ಅವರ `ಬಾವಿಗೆ ಹಾರ' ನಾಟಕ, ಪ್ರೊ. ಬಿ.ಎಸ್. ಜಗಾಪೂರ ಅವರ `ಅಮ್ಮ ಹೇಳು' ಶಿಶು ಕವಿತೆ, ಯಲ್ಲಪ್ಪ ಕುರಿ ಅವರ `ಕೆಂಡ ಕಾರಿದ ಪುಂಡರು' ನಾಟಕ ಕೃತಿಗಳು ಶಿಕ್ಷಣಾಧಿಕಾರಿ ಎಸ್.ಸಿ. ಕರೀಕಟ್ಟಿ, ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ. ಜಿ.ಪಂ. ಸಹಾಯಕ ಎಂಜಿನಿಯರ್ ಎಂ.ಎಸ್. ರೇವಣ್ಣವರ, ಪಿ.ಡಬ್ಲು.ಡಿ. ಎಂಜಿನಿಯರ್ ಕೋರ‌್ಯಾನಮಠ, ವೈದ್ಯಾಧಿಕಾರಿ ಡಾ, ಯರಝರ್ವಿ, ಸಿ.ಪಿ.ಐ. ಎಂ.ಎಸ್. ನಾಯಕ, ಆರ್.ಎಸ್. ಪೂಜಾರ ಇವರ ಸಮ್ಮುಖದಲ್ಲಿ ಬಿಡುಗಡೆ ಯಾಗಲಿವೆ.

ವಿಚಾರಗೋಷ್ಠಿ :ಮುಂಜಾನೆ 12-30 ಕ್ಕೆ ನಿವೃತ್ತ ಪ್ರಾ. ಡಾ. ವಿರೂಪಾಕ್ಷ ಬಡಿಗೇರ ಅವರ ನೇತೃತ್ವದಲ್ಲಿ ನಡೆಯುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಹಂಷಿ ವಿಶ್ವವಿದ್ಯಾಲಯದ ಪ್ರಾ. ಡಾ. ಎಸ್.ಎಸ್. ಅಂಗಡಿ ವಹಿಸುವರು, ಬಾಳೇಶ ಚಿನಗುಡಿ  ಇತಿಹಾಸ ಪರಂಪರೆ ಕುರಿತು, ಡಾ. ಸಂತೋಷ ಹಾನಗಲ್ಲ, ಡಾ. ವೈ.ಎಂ. ಭಜಂತ್ರಿ ಸಾಹಿತ್ಯ ಪರಂಪರೆ ಕುರಿತು ಮಾತನಾಡುವರು,

ಕವಿಗೋಷ್ಠಿ : ಧಾರವಾಡದ ಕವಿ ಡಾ. ಬಸು ಬೇವಿನಗಿಡದ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಬೆಳಗಾವಿ ಡಾ. ಗುರುದೇವಿ ಹುಲೇಪ್ಪನವರಮಠ ಅವರ ಆಶಯ ಭಾಷಣ ಇರುವದು. ಅತಿಥಿಗಳಾಗಿ ಡಾ. ಅಭಿನಂದನ ಕಬ್ಬಿಣ ಆಗಮಿಸುವರು.

ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಶಿವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೈಲಹೊಂಗಲ ಶಾಸಕ ಡಾ. ವಿ.ಐ ಪಾಟೀಲ ವಹಿಸುವರು. ಗದುಗಿನ ಜಾನಪದ ವಿದ್ವಾಂಸ ಡಾ. ಎಸ್.ಎಸ್. ಜಕಬಾಳ ಸಮಾರೋಪ ನುಡಿ, ಅತಿಥಿಗಳಾಗಿ ಎಸ್.ಎಸ್. ಪಾಟೀಲಪದಕಿ, ಮೋಹನ ಏಣಗಿ, ಡಾ. ಪದರಾ, ಪಿ.ಎಸ್.ಐ. ನಿಂಗನಗೌಡ ಪಾಟೀಲ, ಸಿ.ಡಿ.ಪಿ.ಓ ಎ.ಎಸ್. ಮರಿಕಟ್ಟಿ, ನರಸಣ್ಣವರ, ಪಿ.ವಿ. ವಾಸನದ, ಡಿ.ಬಿ. ಹೆಬ್ಬಳ್ಳಿ ಆಗಮಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.