ಇಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ

7

ಇಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ

Published:
Updated:

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ `ಕಾಮೆಡ್-ಕೆ~ ಪ್ರವೇಶ ಪರೀಕ್ಷೆ ಭಾನುವಾರ ಮಧ್ಯಾಹ್ನ ನಡೆಯಲಿದ್ದು, ಅಕ್ರಮಗಳನ್ನು ತಡೆಯಲು ಬಿಗಿಕ್ರಮ ಕೈಗೊಳ್ಳಲಾಗಿದೆ.12 ವೈದ್ಯಕೀಯ ಮತ್ತು 19 ದಂತವೈದ್ಯಕೀಯ ಕಾಲೇಜುಗಳಲ್ಲಿನ ಕಾಮೆಡ್-ಕೆ ಕೋಟಾ ಸೀಟುಗಳ ಭರ್ತಿಗೆ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ.ಈ ಬಾರಿ ಒಟ್ಟು 18,418 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ 12,909 ಮಂದಿ ವೈದ್ಯಕೀಯ ಮತ್ತು 5,509 ಮಂದಿ ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಆಕಾಂಕ್ಷಿಗಳಾಗಿದ್ದಾರೆ. ಭಾನುವಾರವೇ ಸರಿ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಇದಕ್ಕೆ ಏನಾದರೂ ಆಕ್ಷೇಪಣೆಗಳು ಇದ್ದರೆ ಅಭ್ಯರ್ಥಿಗಳು ಫೆ.16ರ ಒಳಗೆ ಸಲ್ಲಿಸಬೇಕು.ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಇದೇ 22ರಂದು ಪ್ರಕಟಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಏನಾದರೂ ಆಕ್ಷೇಪಣೆ ಇದ್ದರೆ 24ರ ಒಳಗೆ ಸಲ್ಲಿಸಬೇಕು. ಫೆ.29ರಂದು ರ‌್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.ಮಾರ್ಚ್ ಕೊನೆ ಅಥವಾ ಏಪ್ರಿಲ್‌ನಲ್ಲಿ ಕೌನ್ಸೆಲಿಂಗ್ ನಡೆಯಲಿದ್ದು, ಮೇ 1ರಿಂದ 2012-13ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ತರಗತಿಗಳು ಆರಂಭವಾಗಲಿವೆ.ನಕಲು ತಡೆಯುವುದು ಮತ್ತು ಮೂಲ ಅಭ್ಯರ್ಥಿಯ ಹೆಸರಿನಲ್ಲಿ ಬೇರೆಯವರು ಪರೀಕ್ಷೆ ಬರೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಕಾಮೆಡ್-ಕೆ ನೀಡಿರುವ ಸೂಚನೆಗಳನ್ನು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಾವಚಿತ್ರವುಳ್ಳ ಗುರುತಿನ ಚೀಟಿ ಇಲ್ಲದೆ ಇದ್ದರೆ ಪರೀಕ್ಷಾ ಕೊಠಡಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಮಧ್ಯಾಹ್ನ 1.45ರ ಒಳಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು.ಬಸ್ ವ್ಯವಸ್ಥೆ: ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಶಾಂತಲಾ ಸಿಲ್ಕ್ ಹೌಸ್ ಬಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12.15ಕ್ಕೆ ಒಂದು ಬಸ್ ಇಲ್ಲಿಂದ ತೆರಳಲಿದೆ. ಪರೀಕ್ಷೆ ಮುಗಿದ ನಂತರ ಇದೇ ಸ್ಥಳಕ್ಕೆ ಹಿಂತಿರುಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry