ಇಂದು ಗೇಟ್ಸ್- ಅಖಿಲೇಶ್ ಭೇಟಿ

7

ಇಂದು ಗೇಟ್ಸ್- ಅಖಿಲೇಶ್ ಭೇಟಿ

Published:
Updated:

ಲಖನೌ (ಐಎಎನ್‌ಎಸ್): ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ರಾಜ್ಯದ ಆರೋಗ್ಯ ಕಾಳಜಿ ಕುರಿತು ಚರ್ಚಿಸಲಿದ್ದಾರೆ. ಆರೋಗ್ಯ ಕಾಳಜಿ ಕುರಿತು ಬಿಲ್ ಮತ್ತು ಮೆಲಿಂಡಾ ಫೌಂಡೇಶನ್ ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲು ಹಲವಾರು ಯೋಜನೆಗಳ ಬಗ್ಗೆ ಗೇಟ್ಸ್ ಚರ್ಚಿಸಲಿದ್ದಾರೆ.ಗೇಟ್ಸ್ ಕಚೇರಿಯ ಸಿಬ್ಬಂದಿ ಕಳೆದ ವಾರ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಗೇಟ್ಸ್ ಮತ್ತು ಅಖಿಲೇಶ್ ಭೇಟಿಗೆ ಅಗತ್ಯ ತಯಾರಿ ಮಾಡಿಕೊಂಡಿವೆ.ನವಜಾತ ಶಿಶು, ಪ್ರಸೂತಿ, ಪೌಷ್ಟಿಕತೆ, ಕುಟುಂಬ ಯೋಜನೆ ಮತ್ತು ಮಕ್ಕಳ ಆರೋಗ್ಯ ಕುರಿತ ಐದು ಅಂಶಗಳ ಕಾರ್ಯಕ್ರಮಗಳನ್ನು ಗೇಟ್ಸ್ ಫೌಂಡೇಶನ್ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲು ಯೋಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry