ಸೋಮವಾರ, ಅಕ್ಟೋಬರ್ 21, 2019
24 °C

ಇಂದು ಚೆನ್ನೈಗೆ ಅಡ್ವಾಣಿ, ಮೋದಿ

Published:
Updated:

ಚೆನ್ನೈ (ಪಿಟಿಐ): ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿಗೆ    ಆಗಮಿಸಲಿದ್ದಾರೆ.  ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಬಿಜೆಪಿಯ ಈ ಇಬ್ಬರು ಮುಖಂಡರು ಜಯಲಲಿತಾ ಒತೆ ಉತ್ತಮ ಬಾಂಧವ್ಯ ಹೊಂದಿದ್ದು, ಚೋ ರಾಮಸ್ವಾಮಿ ಸಂಪಾದಕತ್ವದ `ತುಘಲಕ್~ ತಮಿಳು ರಾಜಕೀಯ ವಾರಪತ್ರಿಕೆ 42ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.ಒಂದು ವೇಳೆ ಈ ಇಬ್ಬರೂ ಮುಖಂಡರು ಮತ್ತು ಜಯಲಲಿತಾ ಭೇಟಿಯಾದರೆ, 2014ರ ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಎಐಎಡಿಎಂಕೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಜಯಾ ಹೇಳಿಕೆ ಬಳಿಕದ ಮೊದಲ ಭೇಟಿ ಇದಾಗಲಿದೆ. ಆದಾಗ್ಯೂ ಸಂಭಾವ್ಯ ಭೇಟಿ ಬಗ್ಗೆ ಇದುವರೆಗೂ ಖಚಿತವಾಗಿಲ್ಲ.ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಮೋದಿ ತೆರಳಿದ್ದರು. ಕಳೆದ ವರ್ಷ ಗುಜರಾತ್‌ನಲ್ಲಿ  ಮೋದಿ ಕೈಗೊಂಡಿದ್ದ ಸದ್ಭಾವನಾ ಉಪವಾಸಕ್ಕೆ ಜಯಾ ತಮ್ಮ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)