ಶುಕ್ರವಾರ, ಜೂನ್ 25, 2021
29 °C

ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದ್ದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡ­ದಂತೆ ಗೃಹರಕ್ಷಕ ದಳ ಮತ್ತು ಕೆಎಸ್‌­ಆರ್‌ಪಿ ಪಡೆ ನಿಯೋಜಿಸಲಾಗಿದೆ.‘ಸ್ವಯಂಪ್ರೇರಿತ ಶಾಂತಿಯುತ ಬಂದ್‌ ಆಚರಿಸಲು ಯಾವುದೇ ಅಭ್ಯಂತರ ಇಲ್ಲ. ಆದರೆ ಬಲವಂತವಾಗಿ ಬಂದ್‌ ಆಚರಿಸುವಂತೆ ಒತ್ತಡ ಹೇರಿ­ದಲ್ಲಿ ಅಂತ­ಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಗ­ಳೂರು ಪೊಲೀಸ್‌ ಆಯುಕ್ತ ಆರ್‌.­ಹಿತೇಂದ್ರ ತಿಳಿಸಿದ್ದಾರೆ. ದ.ಕ ಆಟೋ ಚಾಲಕರು ಮತ್ತು ಬಸ್‌ ಮಾಲೀಕರ ಸಂಘಟನೆಗಳು ಕೂಡ ಯೋಜನೆಯನ್ನು ವಿರೋಧಿಸಿರುವುದ­ರಿಂದ ಸಂಚಾರ ವ್ಯವಸ್ಥೆ ವ್ಯತ್ಯಯವಾಗುವ ನಿರೀಕ್ಷೆ ಇದೆ.ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ಮೊಯಿಲಿ

ದೇವನಹಳ್ಳಿ:
‘ಎತ್ತಿನಹೊಳೆ ಯೋಜನೆ ಕುರಿತು ಕೆಲವರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಮೊಸರಿನಲ್ಲಿ ಕಲ್ಲು ಹುಡುಕಲು ಪ್ರಯತ್ನಿಸುತ್ತಿದ್ದಾರೆ’ ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ಹೇಳಿದರು.ಭಾನುವಾರ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ ಈ ಯೋಜನೆಗೆ ತಜ್ಞರಿಂದ ಸಮಗ್ರ ವರದಿ ಪಡೆದೇ ಶಂಕು ಸ್ಥಾಪನೆ ಮಾಡಲಾಗುತ್ತಿದೆ. ಮೊಯಿಲಿ ವಿರೋಧಿಸಿ ಆದರೆ ಕುಡಿಯುವ ನೀರಿನ ಯೋಜನೆಗೆ ವಿರೋಧ ಮಾಡುವುದು ಬೇಡ’ ಎಂದು  ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.