ಮಂಗಳವಾರ, ಜೂನ್ 15, 2021
21 °C

ಇಂದು ನಗರದಲ್ಲಿ ಕೇಜ್ರಿವಾಲ್‌ ರೋಡ್‌ ಷೋ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ  ಕೇಜ್ರಿವಾಲ್‌  ಶುಕ್ರವಾರ ರಾತ್ರಿ ಬೆಂಗಳೂರಿಗೆ  ಬಂದಿಳಿದರು.ಮಾರ್ಚ್‌ 15ರಂದು ಶನಿವಾರ ಬೆಳಿಗ್ಗೆ 10–15ಕ್ಕೆ ಹೆಬ್ಬಾಳ ದಿಂದ ಪ್ರಾರಂಭವಾಗುವ ‘ರೋಡ್‌ ಷೋ’ ಗಂಗಾನಗರ, ಇಂಡಿಯನ್‌ ಎಕ್ಸ್‌ಪ್ರೆಸ್‌ ಸರ್ಕಲ್‌, ಶಾಂತಿನಗರ, ಜಯನಗರದ 4ನೇ ಹಂತ, ಗಾಂಧಿ ನಗರ, ವಿಜಯನಗರ, ರಾಜಾಜಿನಗರ, ಶಂಕರಮಠ, ಮಲ್ಲೇಶ್ವರದ ಮೂಲಕ ಸಂಜೆ 7ಕ್ಕೆ ಸ್ವಾತಂತ್ರ್ಯ ಉದ್ಯಾನವನ್ನು ತಲುಪಲಿದೆ ಎಂದು ಪಕ್ಷದ ವಕ್ತಾರ ರವಿಕೃಷ್ಣ ರೆಡ್ಡಿ ತಿಳಿಸಿದರು.ಈ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮ ಕೂರು ಸೇರಿದಂತೆ ಹಲವು ಭಾಗಗಳ ಪಕ್ಷದ ಕಾರ್ಯಕರ್ತರು ಭಾಗವಹಿಸ ಲಿದ್ದಾರೆ ಎಂದು ವಿವರಿಸಿದರು.ರಾತ್ರಿ ನಗರದ ಖಾಸಗಿ ಹೋಟೆ ಲೊಂದರಲ್ಲಿ ಉದ್ದಿಮೆದಾರರು ಹಾಗೂ ಖಾಸಗಿ ಕಂಪೆನಿಗಳ ಪ್ರಮುಖರೊಂದಿಗೆ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.ಭಾನುವಾರ ಬೆಳಿಗ್ಗೆ 11ಕ್ಕೆ ಚಿಕ್ಕ ಬಳ್ಳಾಪುರದಲ್ಲಿ ಪ್ರಾರಂಭವಾಗುವ ‘ರೋಡ್‌ ಷೋ’ ದೊಡ್ಡಬಳ್ಳಾಪುರದ ಮೂಲಕ ಯಲಹಂಕಕ್ಕೆ ತೆರಳಿ ಕೊನೆಗೊಳ್ಳಲಿದೆ. ನಂತರ 3ಕ್ಕೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸ ಲಾಗಿರುವ ಸಮಾವೇಶದಲ್ಲಿ ಭಾಗವಹಿ ಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸಂಜೆ 6.30ಕ್ಕೆ ಬ್ರಿಗೇಡ್‌ ರಸ್ತೆಯ ಜೈನ್‌ ಟ್ರಸ್ಟ್‌ನಲ್ಲಿ ನಡೆಯುವ ಜನಾಭಿಪ್ರಾಯ ರೂಪಕರ ಸಭೆಯಲ್ಲಿ ಭಾಗವಹಿಸಿದ ನಂತರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.