ಇಂದು ನಾಳೆ ಆದದ್ದೆಲ್ಲಾ ಒಳಿತೇ...?

7

ಇಂದು ನಾಳೆ ಆದದ್ದೆಲ್ಲಾ ಒಳಿತೇ...?

Published:
Updated:
ಇಂದು ನಾಳೆ ಆದದ್ದೆಲ್ಲಾ ಒಳಿತೇ...?

ಕ್ರಿಯೇಟಿವ್ ಥಿಯೇಟರ್‌ನ ಜನಪ್ರಿಯ ಹಾಸ್ಯ ನಾಟಕ `ಆದದ್ದೆಲ್ಲಾ ಒಳಿತೇ..? ಗುರುವಾರ ಮತ್ತು ಶುಕ್ರವಾರ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.ಕನ್ನಡದ ಹೆಸರಾಂತ ಹಾಸ್ಯ ಲೇಖಕಿ ಟಿ.ಸುನಂದಮ್ಮನವರ ಬರಹದಿಂದ ಪ್ರೇರಣೆಗೊಂಡ ಈ ನಾಟಕವನ್ನು ಸಂಭಾಷಣೆ, ನಟ ಸುಂದರ್ ಅವರು ರಚಿಸಿದ್ದಾರೆ.ಡಾ. ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ಗೀತೆಗಳಿಗೆ ಗಜಾನನ ಟಿ. ನಾಯಕ್ ಸಂಗೀತ ನೀಡಿದ್ದು ಎಂ.ಡಿ.ಪಲ್ಲವಿ ಮತ್ತು ತಂಡದವರು ಹಾಡಿದ್ದಾರೆ. ನಿರ್ದೇಶಕ ಪ್ರಮೊದ್ ಶಿಗ್ಗಾಂವ್ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕದ ಬೆಳಕು ವಿನ್ಯಾಸ ಮುದ್ದಣ್ಣ ರಟ್ಟೆಹಳ್ಳಿ ಅವರದ್ದು. ಪ್ರಸಾಧನ ಕಲಾವಿದ ರಾಮಕೃಷ್ಣ ಕನ್ನರಪಾಡಿ ಅವರೂ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಸುಂದರ್, ಲಕ್ಷ್ಮೀ ಚಂದ್ರಶೇಖರ್, ವಿದ್ಯಾ ವೆಂಕಟರಾಮ್ ಹಾಗೂ ಶಿಲ್ಪಾ ರುದ್ರಪ್ಪ ಅಭಿನಯಿಸಿರುವ ಈ ನಾಟಕ ಈಗಾಗಲೇ 47 ಪ್ರದರ್ಶನಗಳನ್ನು ಕಂಡಿದೆ.

ನಿತ್ಯ ಸಂಜೆ 7.30ಕ್ಕೆ ಪ್ರದರ್ಶನವಾಗಲಿದೆ. ಟಿಕೆಟ್ ದರ ರೂ.100. ಮುಂಗಡ ಬುಕಿಂಗ್ ಮತ್ತು ಮಾಹಿತಿಗೆ: 96206 04479.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry