ಇಂದು, ನಾಳೆ `ಜಪಾನ್ ಹಬ್ಬ'

7
ಇಂಡೋ-ಜಪಾನ್ ಸಾಂಸ್ಕೃತಿಕ ವಿನಿಯಮ

ಇಂದು, ನಾಳೆ `ಜಪಾನ್ ಹಬ್ಬ'

Published:
Updated:
ಇಂದು, ನಾಳೆ `ಜಪಾನ್ ಹಬ್ಬ'

ಬೆಂಗಳೂರು: ಇಂಡೋ-ಜಪಾನ್ ಸಾಂಸ್ಕೃತಿಕ ವಿನಿಯಮ ಕಾರ್ಯಕ್ರಮ `ಜಪಾನ್ ಹಬ್ಬ-2013' ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇದೇ 23 ಹಾಗೂ 24ರಂದು ನಡೆಯಲಿದೆ.ನಗರದ ಜಪಾನೀಸ್ ಅಸೋಸಿಯೇಶನ್‌ನ ಅಧ್ಯಕ್ಷ ಯುಕಿಯೊ ಟಕೆಯರಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `2005ರಿಂದಲೂ ನಗರದಲ್ಲಿ ಜಪಾನ್ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಪ್ರತಿವರ್ಷ ಇಲ್ಲಿನ ಜನರಿಗೆ ಜಪಾನಿನ ಹೊಸ ಸಂಸ್ಕೃತಿಗಳನ್ನು ಪರಿಚಯಿಸಲಾಗುತ್ತಿದೆ. ಕ್ಯೂಗೆನ್ ನಾಟಕ ಈ ಬಾರಿಯ ಉತ್ಸವದ ವಿಶೇಷ ಆಕರ್ಷಣೆ. ಈ ಹಬ್ಬ ಭಾರತ ಹಾಗೂ ಜಪಾನ್‌ಗಳ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆಯಾಗಲಿದೆ' ಎಂದರು.`ಜಪಾನಿನ ಇಜುಮಿ ಸ್ಕೂಲ್‌ನವರು ಇದೇ 24ರಂದು ಸಾಂಪ್ರದಾಯಿಕ ಹಾಸ್ಯ ನಾಟಕ ಕ್ಯೂಗೆನ್ ಪ್ರದರ್ಶಿಸುವರು. ಜಪಾನಿನ ಜನರ ದಿನನಿತ್ಯದ ಬದುಕಿನಲ್ಲಿ ನಡೆಯುವ ಸಣ್ಣ ಘಟನೆಗಳೇ ಈ ಜನಪದ ನಾಟಕದ ಮೂಲವಸ್ತು. ಇವುಗಳಿಗೆ ಹಾಸ್ಯದ ಲೇಪನ ನೀಡಿ ಸರಳವಾಗಿ ಮನಮುಟ್ಟುವಂತೆ ಪ್ರದರ್ಶಿಸಲಾಗುವುದು' ಎಂದರು.ಹಬ್ಬದಲ್ಲಿ ಕರವೊಕೆ ಸ್ಪರ್ಧೆ, ಜಪಾನ್ ರಸಪ್ರಶ್ನೆ, ಸಾಂಪ್ರದಾಯಿಕ ಜಪಾನೀಸ್ ಟೀ ಸಮಾರಂಭ, ಜಪಾನಿನ ಕಾಗದದ ಕಲೆಯಾದ ಒರಿಗಮಿ, ಕ್ಯಾಲಿಗ್ರಫಿ, ನಾಟಕ, ಮೆಹಂದಿ, ಪುಷ್ಪಾಲಂಕಾರ, ಆಹಾರ ಮಳಿಗೆಗಳು ಇರಲಿವೆ. 23ರಂದು ಮಧ್ಯಾಹ್ನ 3ರ ಬಳಿಕ ಚಲನಚಿತ್ರ ಹಾಗೂ ನಾಟಕ ಪ್ರದರ್ಶನ, 24ರಂದು ಬೆಳಿಗ್ಗೆ 10ರಿಂದ ಸಂಜೆ 5.30ರ ವರೆಗೆ ಹಬ್ಬ ಇರಲಿದೆ. ಉಚಿತ ಪ್ರವೇಶ ಎಂದು ಅವರು ಮಾಹಿತಿ ನೀಡಿದರು. ಹಬ್ಬದ ಆಯೋಜನಾ ಸಮಿತಿಯ ಅಧ್ಯಕ್ಷೆ ಸುಮಾ ಎಂ.ಎಸ್. ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry