ಶುಕ್ರವಾರ, ಏಪ್ರಿಲ್ 16, 2021
31 °C

ಇಂದು, ನಾಳೆ ಶಿವರಾತ್ರಿ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರಂತರ ಫೌಂಡೇಶನ್: ರಂಗಶಂಕರ, 2ನೇ ಹಂತ, ಜೆ.ಪಿ.ನಗರ. ಶುಕ್ರವಾರ ಹಾಗೂ ಶನಿವಾರ ಚಂದ್ರಶೇಖರ ಕಂಬಾರರ `ಶಿವರಾತ್ರಿ~ ನಾಟಕ ಪ್ರದರ್ಶನಗೊಳ್ಳಲಿದೆ. ನಿರ್ದೇಶನ- ಚಿದಂಬರರಾವ್ ಜಂಬೆ. ಸಂಜೆ 7.30.ನಾಟಕ ಕುರಿತು: ಶಿವರಾತ್ರಿ ಒಂದು ರಾತ್ರಿಯಲ್ಲಿ ನಡೆವ ಕಥಾವಸ್ತುವನ್ನು ಒಳಗೊಂಡಿದೆ. 12ನೇ ಶತಮಾನದಲ್ಲಿ ನಡೆದ ಬಸವಣ್ಣನ ನೇತೃತ್ವದ ಚಳವಳಿಯನ್ನು ಹೊಸಕಣ್ಣಿನಿಂದ ನೋಡುವ ಈ ನಾಟಕ ಬಸವಣ್ಣ ಮತ್ತು ಬಿಜ್ಜಳನ ಸಂಘರ್ಷಗಳನ್ನು ಸಾಮಾನ್ಯ ಜನವರ್ಗದ ಕಣ್ಣಿನಿಂದ ನೋಡುತ್ತದೆ.

 

ಬೆಲೆಬಾಳುವ ಮುತ್ತಿನಸರವನ್ನು ಅಸಹ್ಯದಂತೆ ಕಾಣುವ ಕಾಶವ್ವ, ಮುದುಕಪ್ಪ, ಸೂಳೆಸಾವಂತ್ರಿ ಒಂದೆಡೆಯಾದರೆ, `ನಿಮ್ಮ ಕನಸಿನಲ್ಲಿ ನನಗೂ ಜಾಗ ಸಿಗುತ್ತದೆಂದು ಕಾದೆ, ಅಂಗೈಯಗಲ ಜಾಗವೂ ಸಿಗಲಿಲ್ಲ~ ಎನ್ನುವ ಬಿಜ್ಜಳ ಇನ್ನೊಂದಡೆ. ನೀವಿರುವ ಜಾಗವನ್ನು ಕೂಡಲಸಂಗಮ ಮಾಡಲು ಹೊರಟೆವು ಆದರೆ ನೀವು ಕತ್ತಲೆಗೆ ಒಯ್ಯುವ ಹಳೆಯ ದಾರಿಯಲ್ಲೇ ನಡೆಯ ಬಯಸಿದಿರಿ ಎನ್ನುವ ಬಸವಣ್ಣ.ಹೀಗೆ ಈ ನಾಟಕ ಕಲ್ಯಾಣದ ದುರಂತವನ್ನು ಒಂದು ರಾತ್ರಿಯಲ್ಲಿ ನಡೆವ ಘಟನೆಗಳ ಮೂಲಕ ತೆರೆದಿಡುತ್ತಾ ಹೋಗುತ್ತದೆ. ಡಾ.ಚಂದ್ರಶೇಖರ ಕಂಬಾರರ ಕಾವ್ಯಮಯ ಭಾಷೆಯ ಸೊಬಗು, ವಾಸ್ತವವಾಗುತ್ತಲೇ ಅತಿವಾಸ್ತವಕ್ಕೆ ಚಿಮ್ಮುವ ರೂಪಕಗಳ ಕಥಾನಕ ಇದಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.