ಇಂದು ಬಸ್ ದಿನ

ಗುರುವಾರ , ಜೂಲೈ 18, 2019
28 °C

ಇಂದು ಬಸ್ ದಿನ

Published:
Updated:

ಬೆಂಗಳೂರು: ನಗರದ ಜನರನ್ನು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗುರುವಾರ (ಜು.4) ಬಸ್ ದಿನ ಹಮ್ಮಿಕೊಂಡಿದೆ.ಹಳೆ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆಗಳಲ್ಲಿ ಬಸ್ ದಿನ ನಡೆಯಲಿದೆ.ಸಂಸ್ಥೆಯು ಪ್ರತಿದಿನ 6305 ಷೆಡ್ಯೂಲ್‌ಗಳೊಂದಿಗೆ 82,000 ಟ್ರಿಪ್‌ಗಳನ್ನು ಆಚರಣೆ ಮಾಡುತ್ತಿದೆ. ಬಸ್ ದಿನದ ಸಂದರ್ಭದಲ್ಲಿ ಈಗಿರುವ 1,500ಕ್ಕಿಂತಲೂ ಅಧಿಕ ಸಾಮಾನ್ಯ ಪಾಳಿ ಷೆಡ್ಯೂಲ್‌ಗಳನ್ನು ರಾತ್ರಿ ಏಳರಿಂದ ರಾತ್ರಿ 10 ಗಂಟೆಯವರೆಗೂ ವಿಸ್ತರಿಸಿ ಆಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸುಮಾರು 3,000 ಹೆಚ್ಚುವರಿ ಟ್ರಿಪ್‌ಗಳನ್ನು ಆಚರಣೆ ಮಾಡಲಾಗುವುದು. ಅಲ್ಲದೆ ಘಟಕಗಳಲ್ಲಿ ಲಭ್ಯ ಇರುವ 100 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು. ಇದರಿಂದ 800 ಟ್ರಿಪ್ ಹೆಚ್ಚುವರಿಯಾಗಿ ದೊರಕಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry