ಇಂದು ಬಸ್ ದಿನ

7

ಇಂದು ಬಸ್ ದಿನ

Published:
Updated:

ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಬಿಎಂಟಿಸಿಯು ಸೆ. 4ರಂದು ಬಸ್ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕೆಳಕಂಡ ಪ್ರಮುಖ ರಸ್ತೆಗಳನ್ನು ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ , ಮಾಗಡಿ ರಸ್ತೆ , ತುಮಕೂರು ರಸ್ತೆ , ಬಳ್ಳಾರಿ ರಸ್ತೆ , ಥಣಿಸಂದ್ರ ರಸ್ತೆ ,ಹೆಣ್ಣೂರು ರಸ್ತೆ , ಹಳೆ ಮದ್ರಾಸ್ ರಸ್ತೆ.ಈ ತಿಂಗಳ ಬಸ್ ದಿನದಂದು ಪ್ರಸ್ತುತ ಚಾಲ್ತಿಯಲ್ಲಿರುವ ಸುಮಾರು 1,500 ಕ್ಕಿಂತಲೂ ಹೆಚ್ಚಿನ ಸಾಮಾನ್ಯ ಪಾಳಿಯನ್ನು ರಾತ್ರಿ 7ರಿಂದ 10ರ ವರೆಗೆ ವಿಸ್ತರಿಸಲಾಗುವುದು. ಅಲ್ಲದೇ ಘಟಕಗಳಲ್ಲಿ ಲಭ್ಯ ಇರುವ ಸುಮಾರು 100ಕ್ಕೂ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ಮಾಡಲು ನಿಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry