ಇಂದು ಬಿಹಾರ, ಮಹಾರಾಷ್ಟ್ರಕ್ಕೆ ರಾಷ್ಟ್ರಪತಿ

7

ಇಂದು ಬಿಹಾರ, ಮಹಾರಾಷ್ಟ್ರಕ್ಕೆ ರಾಷ್ಟ್ರಪತಿ

Published:
Updated:

ನವದೆಹಲಿ (ಪಿಟಿಐ): ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಬುಧವಾರ ಮತ್ತು ಗುರುವಾರ ಎರಡು ದಿನಗಳ ಭೇಟಿ ನೀಡಲಿದ್ದಾರೆ.ಬಿಹಾರದಲ್ಲಿ ಅ. 3ರಂದು ರಾಜೇಂದ್ರ ಮಂದಾಪ್ ಪ್ರತಿಮೆಯ ಅನಾವರಣ ಮಾಡಲಿರುವ ಪ್ರಣವ್, ಪಟ್ನಾದಲ್ಲಿ ನಡೆಯುವ ಬಿಹಾರದ ಕೃಷಿ ಮುನ್ನೋಟ (2012-17) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ದರ್ಬಾಂಗ್‌ನ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲೂ ಮಾತನಾಡಲಿದ್ದಾರೆ ಎಂದು ರಾಷ್ಟ್ರಪತಿ ಭವನದ ವಕ್ತಾರರು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂಬೈನಲ್ಲಿ ಅ. 4ರಂದು ರಾಸಾಯನಿಕ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉದ್ದಿಮೆಯ `ಭಾರತ- ಸಿಎಚ್‌ಇಎಂ~ನ 7ನೇ ಆವೃತ್ತಿಯ ಬಿಡುಗಡೆಯನ್ನೂ ರಾಷ್ಟ್ರಪತಿ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry