ಇಂದು ಭಾರತಕ್ಕೆ ಅಮೆರಿಕ ವಾಣಿಜ್ಯ ನಿಯೋಗ

7

ಇಂದು ಭಾರತಕ್ಕೆ ಅಮೆರಿಕ ವಾಣಿಜ್ಯ ನಿಯೋಗ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗ್ಯಾರಿ ಲಾಕ್ ನೇತೃತ್ವದಲ್ಲಿ ವಾಣಿಜ್ಯ ನಿಯೋಗವು ಫೆಬ್ರುವರಿ 6ರಂದು ನವದೆಹಲಿಗೆ ಆಗಮಿಸಲಿದೆ.ಆಮದು-ರಫ್ತು ಬ್ಯಾಂಕಿನ ಮತ್ತು ಅಮೆರಿಕದ ವಾಣಿಜ್ಯ ಅಭಿವೃದ್ಧಿ ಏಜೆನ್ಸಿಯ ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ಈ ನಿಯೋಗವು ಬೆಂಗಳೂರು ಮತ್ತು ಮುಂಬೈಗೆ ಕೂಡ ಭೇಟಿ ನೀಡಲಿದೆ. ಫೆಬ್ರುವರಿ 8 ಮತ್ತು 9ರಂದು ಬೆಂಗಳೂರಿಗೆ ಭೇಟಿ ನೀಡುವ ಈ ನಿಯೋಗವು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿದೆ.ಅಲ್ಲದೆ ಎಚ್‌ಎಎಲ್‌ಗೆ ಭೇಟಿ ನೀಡಲಿದೆ.ಫೆಬ್ರುವರಿ 9ರಂದು ಲಾಕ್ ಅವರು, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಇಸ್ರೊದ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮುಂಬೈಗೆ ಪಯಣಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry