ಇಂದು ಭೂತಾನ್ ದೊರೆ ವಿವಾಹ

7

ಇಂದು ಭೂತಾನ್ ದೊರೆ ವಿವಾಹ

Published:
Updated:

ಥಿಂಪು (ಪಿಟಿಐ): ಭೂತಾನ್‌ನ ಖ್ಯಾತ ದೊರೆ ಜಿಗ್ಮೆ  ಕೇಸರ್ ನಮ್‌ಗೇಲ್ ವಾಂಗ್‌ಚುಕ್ ಅವರು ಭಾರತದಲ್ಲಿ ವ್ಯಾಸಂಗ ಮಾಡಿದ ಯುವತಿ ಜೆತ್ಸುನ್ ಪೆಮಾ ಅವರೊಂದಿಗೆ ಗುರುವಾರ ಮದುವೆಯಾಗಲಿದ್ದಾರೆ.ಭೂತಾನ್‌ದಂಥ ಸಣ್ಣ ರಾಷ್ಟ್ರದ ಇತಿಹಾಸದಲ್ಲಿ ಈ ವಿವಾಹವನ್ನು ಚರಿತ್ರಾರ್ಹ ಘಟನೆ ಎಂದೇ  ಪರಿಗಣಿಸಲಾಗಿದೆ.

ಆಕ್ಸ್‌ಫರ್ಡ್ ವಿ.ವಿಯಲ್ಲಿ ಓದಿರುವ 31 ವರ್ಷದ ದೊರೆಯು ತಮಗಿಂತ 10 ವರ್ಷ ಚಿಕ್ಕವಳಾಗಿರುವ ಪೈಲಟ್ ಪುತ್ರಿ ಪೆಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಐತಿಹಾಸಿಕ ನಗರ ಪುನಖಾದಲ್ಲಿ ಬೌದ್ಧ ಸಂಪ್ರದಾಯದ ಪ್ರಕಾರ ವೈಭವೋಪೇತ  ಮದುವೆ ಸಮಾರಂಭ ಜರುಗಲಿದೆ.ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಸೇರಿದಂತೆ 1,500 ಅತಿಥಿಗಳ ಸಮ್ಮುಖದಲ್ಲಿ ಈ ವಿವಾಹ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry