ಮಂಗಳವಾರ, ಜೂನ್ 22, 2021
22 °C

ಇಂದು ಮುರುಘಾ ಶರಣರ ನಿರಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ವಕೀಲರು, ಪತ್ರಕರ್ತರು ಹಾಗೂ ಪೊಲೀಸರ ನಡುವಿನ ಸಂಘರ್ಷವನ್ನು ತಿಳಿಗೊಳಿಸಿ ಸಮಾಜದಲ್ಲಿ ಸಾಮರಸ್ಯ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರು ಮಂಗಳವಾರ ನಗರದಲ್ಲಿ ಮೂರು ಗಂಟೆ ಸಾಂಕೇತಿಕ ನಿರಶನ ನಡೆಸಲು ನಿರ್ಧರಿಸಿದ್ದಾರೆ.

ಗಾಂಧಿನಗರದ ಕಾನಿಷ್ಕ ಹೋಟೆಲ್ ಬಳಿಯ ತಿಪ್ಪಶೆಟ್ಟಿ ಮಠದ ಆವರಣದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ನಿರಶನ ನಡೆಸಲು ತೀರ್ಮಾನಿಸಲಾಗಿದ್ದು, ಆಸಕ್ತ ಮಠಾಧೀಶರು, ವಕೀಲರು, ಪತ್ರಕರ್ತರು, ಪೊಲೀಸರು, ಪ್ರಗತಿಪರರು ಮುಕ್ತವಾಗಿ ಭಾಗವಹಿಸಬಹುದು ಎಂದು ಮುರುಘಾ ಶರಣರು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

`ಈ ಮೊದಲೇ ಸಾಧ್ಯವಾದಷ್ಟು ಮಟ್ಟಿಗೆ ಪರಸ್ಪರ ರಾಜಿ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಕಳೆದ ವಾರ ಮುಖ್ಯಮಂತ್ರಿಗಳು ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾದ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಲಿಲ್ಲ.

ಮಂಗಳವಾರ ಕೈಗೊಳ್ಳಲಿರುವ ನಿರಶನ ರಾಜಿ ಸಂಧಾನಕ್ಕೆ ಪ್ರಥಮ ಹೆಜ್ಜೆ ಎಂದು ನಾನು ಭಾವಿಸಿದ್ದೇನೆ~ ಎಂದು ಅವರು ತಿಳಿಸಿದರು.

`ಮೂರು ಕ್ಷೇತ್ರಗಳ ಪ್ರತಿನಿಧಿಗಳು ಕೂಡ ವೈಯಕ್ತಿಕ ದ್ವೇಷವನ್ನು ಬದಿಗೊತ್ತಿ ಪರಸ್ಪರ ಮಾತುಕತೆಗೆ ಮುಂದಾಗುವ ಮೂಲಕ ಸಮಾಜದಲ್ಲಿ ಶಾಂತಿ- ಸೌಹಾರ್ದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು.

ಬಿಗುವಿನ ಪರಿಸ್ಥಿತಿ ಸಡಿಲಗೊಲಗೊಳಿಸಿ, ವಾತಾವರಣ ಮಾಮೂಲಿ ಸ್ಥಿತಿಗೆ ತಲುಪಲು ಎಲ್ಲರೂ ಸಹಕಾರ ನೀಡಬೇಕು~ ಎಂದು ಮನವಿ ಮಾಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.