ಇಂದು ಮೋದಿ ಭವಿಷ್ಯ

7
ಹಿಮಾಚಲದಲ್ಲೂ ಮತ ಎಣಿಕೆ

ಇಂದು ಮೋದಿ ಭವಿಷ್ಯ

Published:
Updated:
ಇಂದು ಮೋದಿ ಭವಿಷ್ಯ

ಅಹಮದಾಬಾದ್/ಶಿಮ್ಲಾ(ಪಿಟಿಐ): ಇಡೀ ದೇಶ ಕಾತರದಿಂದ ನಿರೀಕ್ಷಿಸುತ್ತಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿದೆ.ಇದರೊಂದಿಗೆ ಹಿಮಾಚಲ ಪ್ರದೇಶದ ಚುನಾವಣೆಯ ಮತ ಎಣಿಕೆಯೂ ನಡೆಯಲಿದ್ದು, ಬಿಜೆಪಿಯ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ನ ವೀರಭದ್ರ ಸಿಂಗ್ ಅವರ ಭವಿಷ್ಯ ನಿರ್ಧಾರವಾಗಲಿದೆ. ಗುಜರಾತ್‌ನಲ್ಲಿ ಒಟ್ಟು 182 ಕ್ಷೇತ್ರಗಳಲ್ಲಿ ಡಿಸೆಂಬರ್ 13 ಮತ್ತು 17ರಂದು ಎರಡು ಹಂತದಲ್ಲಿ ಮತದಾನವಾಗಿತ್ತು. ಈ ಬಾರಿ ಶೇ 71.32 ರಷ್ಟು ಮತದಾನವಾಗಿತ್ತು.ಪ್ರಮುಖರು:  ಮೋದಿ,  ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್, ಕಾಂಗ್ರೆಸ್‌ನ ಶ್ವೇತಾ ಭಟ್ ಸೇರಿದಂತೆ ಮೂವತ್ಮೂರು ಪ್ರಮುಖ ಅಭ್ಯರ್ಥಿಗಳು ತಮ್ಮ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಒಟ್ಟು 1666 ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ವೃತ್ತಿಪರ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಸಾಧಿಸಲಿದ್ದಾರೆ. ಕಾಂಗ್ರೆಸ್ ಕೊನೆ ಸ್ಥಾನಗಳಿಸಲಿದೆ.ಹಿಮಾಚಲ ಪ್ರದೇಶದಲ್ಲಿ 68 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಶೇ 74.7ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ಪಿ.ಧುಮಾಲ್, ಹಾಲಿ ಸಚಿವ ಸಂಪುಟದ ಹತ್ತು ಸಚಿವರು, ಬಿಜೆಪಿ ಮುಖ್ಯಸ್ಥ ಸತ್ಪಾಲ್ ಸಿಂಗ್, ವಿರೋಧ ಪಕ್ಷದ ನಾಯಕಿ ವಿದ್ಯಾ ಸ್ಟೋಕ್ಸ್ ಸೇರಿದಂತೆ 64 ಶಾಸಕರು, ಹನ್ನೆರಡಕ್ಕೂ ಅಧಿಕ ಮಾಜಿ ಶಾಸಕರು ಸೇರಿದಂತೆ ಒಟ್ಟು 459 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.ಎರಡೂ ರಾಜ್ಯಗಳಲ್ಲಿ ಬೆಳಿಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭವಾಗಿ ಸಂಜೆ ನಾಲ್ಕರ ಹೊತ್ತಿಗೆ ಫಲಿತಾಂಶ ಲಭ್ಯವಾಗಲಿದೆ  ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry