ಇಂದು ರಂಗಗೀತೋತ್ಸವ

7

ಇಂದು ರಂಗಗೀತೋತ್ಸವ

Published:
Updated:

ಆನೇಕಲ್ : ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ವತಿಯಿಂದ ರಂಗಗೀತೋತ್ಸವ ಹಾಗೂ ಸಂಘದ ವಾರ್ಷಿಕೋತ್ಸವ ಶುಕ್ರವಾರ ಆನೇಕಲ್‌ನ ಗುರುಭವನದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ ಉದ್ಘಾಟಿಸಲಿದ್ದು, ಕಾಂಗ್ರೆಸ್ ಮುಖಂಡ ಎ.ತಿಮ್ಮಾರೆಡ್ಡಿ ಅಧ್ಯಕ್ಷತೆ ವಹಿಸುವರು. ಪೌರಾಣಿಕ ರಂಗಭೂಮಿ ನಡೆದು ಬಂದ ದಾರಿ ವಿಷಯದ ಕುರಿತು ಕರ್ನಾಟಕ ರಂಗ ಸಂಗೀತ ಪರಿಷತ್‌ನ ಶಾಂತಕುಮಾರ್ ವಿಚಾರ ಮಂಡಿಸುವರು.ರಂಗಗೀತೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಜಿಲ್ಲಾ ಸಂಚಾಲಕ ಸಂಜಯ್‌ಕುಮಾರ್ ತಿಳಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಿಯೋನಿಕ್ಸ್ ಅಧ್ಯಕ್ಷ ಎಂ.ಯಂಗಾರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪಿ.ರಾಧಾರಮಣ ತಿಳಿಸಿದ್ದಾರೆ. ವಾರ್ಷಿಕೋತ್ಸವ: ತಾಲ್ಲೂಕಿನ ಜಿಗಣಿಯ ನಿತ್ಯಾನಂದ ಸ್ವಾಮಿ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಸಂಘದ ಸಮಾರೋಪ, ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry