ಇಂದು ರಥ ಸಪ್ತಮಿ

7

ಇಂದು ರಥ ಸಪ್ತಮಿ

Published:
Updated:

ಇಂದು ರಥಸಪ್ತಮಿ. ನಗರದ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ, ರಥೋತ್ಸವ. ಸೂರ್ಯದೇವ ವಿಶ್ವದ ಚೇತನ. ಆತ ಇಲ್ಲದಿದ್ದರೆ ಈ ವಿಶ್ವವೇ ಇಲ್ಲ. ಈ ಕಾರಣದಿಂದಲೇ ಭಾರತೀಯ ಪರಂಪರೆಯಲ್ಲಿ ಸೂರ್ಯಾರಾಧನೆಗೆ ತುಂಬ ಮಹತ್ವ.ಬೆಳಕಿನ ಏಳು ಬಣ್ಣಗಳನ್ನು ಸಂಕೇತಿಸುವಂತೆ ಏಳು ಕುದುರೆಗಳ ರಥದಲ್ಲಿ ಅರ್ಜುನನ ಸಾರಥ್ಯದಲ್ಲಿ ಸೂರ್ಯದೇವ ಮಾಘ ಮಾಸದ ಈ ಏಳನೇ ದಿನ ಉತ್ತರದ ಕಡೆ ಪಥ ಬದಲಿಸುತ್ತಾನೆ. ಇದೇ ರಥಸಪ್ತಮಿ. ಕೆಲವೊಂದು ನಂಬಿಕೆಗಳ ಪ್ರಕಾರ ಇದು ಸೂರ್ಯನ ಜನ್ಮ ದಿನ ಆಚರಣೆಯ ಸಂಭ್ರಮವೂ ಹೌದು. ಹಿಂದೂಗಳಿಗೆ ಈ ಹಬ್ಬ ವಿಶೇಷ. ಸೂರ್ಯೋದಯಕ್ಕೂ ಮುಂಚೆ ಎದ್ದು ಎಕ್ಕದ ಗಿಡದ ಎಲೆಯನ್ನು ಭುಜದ ಮೇಲೆ ಇಟ್ಟುಕೊಂಡು ಸ್ನಾನ ಮಾಡುವ

ಮೂಲಕ ಸೂರ್ಯದೇವನ ಸ್ಮರಣೆ ಮಾಡಿದರೆ ಒಳ್ಳಯದಾಗುತ್ತದೆ ಎಂಬ ನಂಬಿಕೆ ಇದೆ. ರಥಸಪ್ತಮಿಯಂದು ದೇವಾಲಯಗಳಲ್ಲಿ ಸೂರ್ಯೋದಯ ಸಮಯಕ್ಕೆ ವಿಶೇಷ ಪೂಜೆ ನಡೆಯುತ್ತದೆ. ಅನೇಕ ಕಡೆ ಬೆಳ್ಳಂಬೆಳಗ್ಗೆ ದೇವರ ರಥ ಎಳೆಯಲಾಗುತ್ತದೆ.ಪ್ರತಿವರ್ಷದಂತೆ ಈ ಸಲವೂ ಆಡುಗೋಡಿಯಲ್ಲಿ 31 ದೇವರುಗಳ ಮುತ್ತಿನ ಪಲ್ಲಕ್ಕಿ ರಥೋತ್ಸವ,  ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅವೆನ್ಯೂ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಿಂದಲೂ ಅನೇಕ ದೇವರುಗಳ ತೇರು ಹೊರಡಲಿದೆ. ಹಲಸೂರಿನ ಸೋಮೇಶ್ವರ ದೇವಾಲಯ, ಮಲ್ಲೆೀಶ್ವರದ ರಾಮಮಂದಿರ, ಬ್ಯಾಟರಾಯನಪುರದ ಕೋದಂಡರಾಮಸ್ವಾಮಿ ದೇವಾಲಯ, ಸೇರಿದಂತೆ ಹಲವು ದೇವಾಲಯಗಳಲ್ಲಿ ತೇರನ್ನು ಎಳೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ರಥಸಪ್ತಮಿಯ ತೇರನ್ನು ಎಳೆದರೆ ಒಳ್ಳೆಯದಾಗಲಿದೆ ಎಂಬ ನಂಬಿಕೆ. ಹೀಗಾಗಿ ಭಕ್ತರಲ್ಲಿ ತೇರು ಎಳೆಯಲು ಪೈಪೋಟಿ. ರಾಮಮಂದಿರಗಳಲ್ಲಿ ಭಜನೆ, ಸಂಗೀತ, ನೃತ್ಯ ಕಾರ್ಯಕ್ರಮಗಳಿರುತ್ತವೆ.ಆಡುಗೋಡಿಯ ಮುನ್ನಿಚೆನ್ನಪ್ಪ ಶಾಲೆಯ ಆವರಣದಲ್ಲಿ ಕುಸ್ತಿ ಪಂದ್ಯಗಳು ನಡೆಯಲಿದೆ. ಕಾರ್ಯಕ್ರಮ ನೋಡಲು ಪ್ರೇಕ್ಷಕರಿಗೆ ತೊಂದರೆಯಾಗದಂತೆ ಆಡುಗೋಡಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರವನ್ನು ಗುರುವಾರ ರಾತ್ರಿ 8 ರಿಂದ ಶುಕ್ರವಾರ 11 ರಂದು ಬೆಳಿಗ್ಗೆ 8 ರವರೆಗೆ ಬದಲಾಯಿಸಲಾಗಿದೆ. ರಥ ಸಪ್ತಮಿ

ಆಂಜನೇಯಸ್ವಾಮಿ ದೇವಸ್ಥಾನ: ಗುರುವಾರ ರಥ ಸಪ್ತಮಿ ನಿಮಿತ್ತ ಬೆಳಿಗ್ಗೆ 5ರಿಂದ ಸುಪ್ರಭಾತ, ಪೂಜೆ. ಬೆಳಿಗ್ಗೆ 9.30 ರಿಂದ ಸಂಜೆ 5ರ ವರೆಗೆ ಅನ್ನಸಂತರ್ಪಣೆ.

ಸ್ಥಳ: ಬಿಳೇಶಿವಾಲೆ (ಬೆಂಗಳೂರು ಪೂರ್ವ ತಾಲ್ಲೂಕು). ಬ್ರಹ್ಮರಥೋತ್ಸವ

ಜ್ಯೋತಿನಗರೇಶ್ವರಸ್ವಾಮಿ ಮತ್ತು ಚೆನ್ನಕೇಶವಸ್ವಾಮಿ ದೇವಸ್ಥಾನ ಸಮಿತಿ: ಗುರುವಾರ ಬೆಳಿಗ್ಗೆ 8ಕ್ಕೆ ಮಹಾ ಅಭಿಷೇಕ. ಮಧ್ಯಾಹ್ನ 12.15ಕ್ಕೆ ಬ್ರಹ್ಮರಥೋತ್ಸವ. ಶುಕ್ರವಾರ ಸಂಜೆ 6.30ಕ್ಕೆ ಅಶ್ವವಾಹನೋತ್ಸವ, ಭಾಗವಂತಿಕೆ ಸಮೇತ ಶಯನೋತ್ಸವ.

ಸ್ಥಳ: ಚೆನ್ನರಾಯಸ್ವಾಮಿಗುಡಿ ರಸ್ತೆ, ನಗರ್ತರಪೇಟೆ ಕ್ರಾಸ್, ಗಾಣಿಗರ ಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry