ಗುರುವಾರ , ಜೂನ್ 17, 2021
21 °C

ಇಂದು ರೈಲು ಸಂಚಾರ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಅರಸೀಕೆರೆ-ಬೀರೂರು ಮಧ್ಯೆ ಜೋಡಿ ಹಳಿ ಅಳವಡಿಸುವ ಕಾಮಗಾರಿ ನಡೆಯಲಿರುವುದರಿಂದ ಈ ವಿಭಾಗದಲ್ಲಿ ಮಾರ್ಚ್ 21ರಂದು ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತಿದೆ.ಬಳ್ಳಕೆರೆ ನಿಲ್ದಾಣದಲ್ಲಿ ಹಳಿ ಜೋಡಣೆ ಕಾಮಗಾರಿ ನಡೆಯಲಿರುವುದರಿಂದ ಅಂದು ಬೆಳಿಗ್ಗೆ 11.10ರಿಂದ ಮಧ್ಯಾಹ್ನ 3.10ರವರೆಗೆ ರೈಲು ಸಂಚಾರವನ್ನು ಬಂದ್ ಮಾಡಲಾಗುತ್ತಿದೆ.ಕಾಮಗಾರಿ ಹಿನ್ನೆಲೆಯಲ್ಲಿ ಮೈಸೂರು-ಶಿವಮೊಗ್ಗ ಟೌನ್ (ಗಾಡಿ ಸಂ.56270) ಪ್ಯಾಸೆಂಜರ್ ರೈಲು ಮೈಸೂರಿನಿಂದ ಅರಸೀಕೆರೆವರೆಗೆ ಮಾತ್ರ ಚಲಿಸಲಿದೆ. ಅರಸೀಕೆರೆ-ಮೈಸೂರು ರೈಲು (ಸಂ.56269) ಅರಸೀಕೆರೆಯಿಂದ ನಿಗದಿತ ಅವಧಿಗಿಂತ 45 ನಿಮಿಷ ತಡವಾಗಿ ಹೊರಡಲಿದೆ. ಈ ರೈಲು ಅರಸೀಕೆರೆ-ಬೀರೂರು ನಿಲ್ದಾಣಗಳ ಮಧ್ಯೆ ಭಾಗಶಃ ರದ್ದಾಗಲಿದೆ.ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ ರೈಲು (ಸಂ.56269) ಶಿವಮೊಗ್ಗದಿಂದ ಬೀರೂರುವರೆಗೆ ಸಂಚರಿಸಲಿದೆ. ಅಲ್ಲದೇ ಬೀರೂರು-ಶಿವಮೊಗ್ಗ (ಸಂ.56270) ರೈಲು ಸಂಚಾರವನ್ನು ಬೀರೂರು-ಅರಸೀಕೆರೆ ನಿಲ್ದಾಣಗಳ ಮಧ್ಯೆ ಭಾಗಶಃ ರದ್ದುಗೊಳಿಸಲಾಗುತ್ತದೆ.ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ (ಗಾಡಿ ಸಂ.56515) ರೈಲನ್ನು ದೇವನೂರಿನಲ್ಲಿ ಎರಡು ಗಂಟೆ 15 ನಿಮಿಷಗಳ ಕಾಲ ತಡೆ ಹಿಡಿಯಲಾಗುತ್ತದೆ. ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲನ್ನು (ಗಾಡಿ ಸಂ.56516) ಕಡೂರು ನಿಲ್ದಾಣದಲ್ಲಿ ಒಂದು ಗಂಟೆ 10 ನಿಮಿಷಗಳವರೆಗೆ ತಡೆಹಿಡಿಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.ನೈರುತ್ಯ ರೈಲ್ವೆ: ಆಯ್ಕೆ ಪಟ್ಟಿ ಪ್ರಕಟ

ಹುಬ್ಬಳ್ಳಿ:
ನೈರುತ್ಯ ರೈಲ್ವೆ ವಲಯದ ನೇಮಕಾತಿ ಘಟಕವು 4,701 ಗ್ರೂಪ್ `ಡಿ~ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿಯನ್ನು ತನ್ನ ವೆಬ್‌ಸೈಟ್ www.swr.indianrailways.gov.in ನಲ್ಲಿಯೂ ಪ್ರಕಟಿಸಿದೆ. ಹೆಚ್ಚುವರಿ ಅಭ್ಯರ್ಥಿಗಳು ಹಾಗೂ ಫಲಿತಾಂಶ ತಡೆಹಿಡಿಯಲಾದ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.ಪಟ್ಟಿಯಲ್ಲಿ ಲೋಪಗಳು ಕಂಡು ಬಂದಲ್ಲಿ ಅಭ್ಯರ್ಥಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಇಲ್ಲವೇ ತೆಗೆದು ಹಾಕುವ ಅಧಿಕಾರವನ್ನು ರೈಲ್ವೆ ಆಡಳಿತವು ಕಾಯ್ದಿರಿಸಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.