ಇಂದು ವಿದ್ಯಾ ಮದುವೆ

7

ಇಂದು ವಿದ್ಯಾ ಮದುವೆ

Published:
Updated:

ಬುಧವಾರ ಸಂಜೆ ಸರಳವಾಗಿ ಮೆಹೆಂದಿ ಸಮಾರಂಭ ಮುಗಿಸಿಕೊಂಡಿರುವ ವಿದ್ಯಾ ಬಾಲನ್ ಶುಕ್ರವಾರ ಮದುವೆಯಾಗಲಿದ್ದಾರೆ. ಶನಿವಾರ ಚೆನ್ನೈನಲ್ಲಿ ಆರತಕ್ಷತೆ ಇದೆ ಎಂದು ಹೇಳಲಾಗಿದೆ. ಯುಟಿವಿಯ ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ದಾರ್ಥ್ ಕಪೂರ್ ಜೊತೆಯಾಗಲಿರುವ ವಿದ್ಯಾ, ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮೆಹೆಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ವಧುವಿನಂತೆ ಮೊಣಕೈವರೆಗೂ ಮದರಂಗಿ ಚಿತ್ತಾರ ಒಲ್ಲೆನೆಂದ ವಿದ್ಯಾ, ಕೈ ಮೇಲೆ ಕೇವಲ ಚಂದ್ರ ತಾರೆಗಳಂಥ ಚಿತ್ತಾರವನ್ನೇ ಹಾಕಿಸಿಕೊಂಡಿದ್ದಾರೆ. ಕೇವಲ ಅಂಗೈಯಲ್ಲಿ ಮಾತ್ರ ಮೆಹೆಂದಿ ಹಾಕಿಸಿಕೊಂಡಿರುವ ವಿದ್ಯಾ, ಅಂದು ಬೆಂಗಾಲಿ ಶೈಲಿಯಲ್ಲಿ ಹಳದಿ ಸೀರೆಯನ್ನು ಧರಿಸಿದ್ದರು.ಬೆಂಗಾಲಿ ಶೈಲಿಯ ಆಭರಣಗಳನ್ನು ಧರಿಸಿದ್ದರು. ಕುಟುಂಬದ ಸದಸ್ಯರು ಮತ್ತು ಆಪ್ತರ ನಡುವೆ ಕಡು ಹಸಿರು ಸೀರೆಯುಟ್ಟು ಬಂದ ರೇಖಾ ಗಮನ ಸೆಳೆದರು. ಮದುವೆಯು ಪಂಜಾಬಿ ಹಾಗೂ ದಕ್ಷಿಣ ಭಾರತೀಯ ಶೈಲಿಯಲ್ಲಿ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry