ಇಂದು ವಿಶ್ವ ಬೆನ್ನೆಲುಬು ದಿನ ಬೆನ್ನುಹುರಿ ಜಾಗೃತರಾಗಿರಿ

7

ಇಂದು ವಿಶ್ವ ಬೆನ್ನೆಲುಬು ದಿನ ಬೆನ್ನುಹುರಿ ಜಾಗೃತರಾಗಿರಿ

Published:
Updated:
ಇಂದು ವಿಶ್ವ ಬೆನ್ನೆಲುಬು ದಿನ ಬೆನ್ನುಹುರಿ ಜಾಗೃತರಾಗಿರಿ

ಅಕ್ಟೋಬರ್ 16ರಂದು ಪ್ರಪಂಚದಾದ್ಯಂತ `ವಿಶ್ವ ಬೆನ್ನೆಲುಬು ದಿನ~ವನ್ನು ಆಚರಿಸಲಾಗುತ್ತಿದೆ. ಬೆನ್ನು ಭುಜ, ಕೈ-ಕಾಲು, ಕುತ್ತಿಗೆ ನೋವಿನಂತಹ ಬೆನ್ನುಹುರಿ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ.

ಈ ಬಗ್ಗೆ `ಸೀತಾ ಬಥೇಜಾ~ ಆಸ್ಪತ್ರೆಯ ಬೆನ್ನುಹುರಿ ತಜ್ಞ ಮತ್ತು ಸಮಾಲೋಚಕ ಡಾ.ಅರವಿಂದ್ ಬಥೇಜಾ `ಮೆಟ್ರೊ~ ಜೊತೆ ಮಾತನಾಡಿದ್ದಾರೆ.ಏನಿದು `ಬೆನ್ನುಹುರಿ~ ಸಮಸ್ಯೆ?

`ಬೆನ್ನುಹುರಿ~ ನಮ್ಮ ನರಮಂಡಲ ವ್ಯವಸ್ಥೆಯ ಒಂದು ಭಾಗವಾಗಿದ್ದು, ದೇಹ ಮತ್ತು ಮಿದುಳಿನ ನಡುವೆ ಸಂದೇಶವನ್ನು ರವಾನಿಸುವ ಕಾರ್ಯ ನಿರ್ವಹಿಸುತ್ತದೆ. ಆಘಾತ, ಅಪಘಾತ, ಗಡ್ಡೆ ಮುಂತಾದ ಕಾರಣಗಳಿಂದ ಇದು ತೊಂದರೆಗೀಡಾಗಬಹುದು.ಬೆನ್ನುನೋವಿಗೆ ಪರಿಹಾರವೇನು?

ಬೆನ್ನುನೋವಿಗೆ ನೋವು ನಿವಾರಕಗಳು ಪರಿಹಾರವಲ್ಲ. ವೈದ್ಯಕೀಯ ಸಲಹೆ ಪಡೆದು ಚಿಕಿತ್ಸೆಗೆ ಒಳ ಪಡಬೇಕು. ಸಣ್ಣ ನಿರ್ಲಕ್ಷ್ಯದಿಂದಲೂ  ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಸಂದರ್ಭ ಒದಗಬಹುದು.ಆಹಾರದಲ್ಲಿ ವಿಟಮಿನ್ `ಡಿ~ ಮತ್ತು `ಸಿ~ ಅಂಶವಿರುವ ಆಹಾರವನ್ನು ಸೇವಿಸಬೇಕು. ಇವು ಅಣಬೆ, ಮೊಟ್ಟೆ, ಮೀನು, ಸೊಪ್ಪು, ಬೆಳ್ಳುಳ್ಳಿ, ಆಲೂಗಡ್ಡೆ, ಸೌತೆಕಾಯಿ ಮೂಲಂಗಿಯಂತಹ ತರಕಾರಿಯಲ್ಲಿ ಸಿಗುತ್ತವೆ.ನಿಲ್ಲುವ, ಕುಳಿತುಕೊಳ್ಳುವ ಹಾಗೂ ನಡೆಯುವ ಭಂಗಿ ಸರಿಯಾಗಿರಬೇಕು.  ಬೆನ್ನುಹುರಿ ಸಮಸ್ಯೆಯಲ್ಲಿ ಎಷ್ಟು ಪ್ರಕಾರಗಳಿವೆ?

ಎರಡು ಭಾಗವಾಗಿ ವಿಂಗಡಿಸಬಹುದು. 

* ಯಾಂತ್ರಿಕ ಬೆನ್ನುನೋವು

*ದೀರ್ಘ ಕಾಲಿಕ ಬೆನ್ನುನೋವುಬೆನ್ನುಮೂಳೆಯ ಸುತ್ತಲಿನ ಮಾಂಸಖಂಡಗಳ ಮೇಲೆ ಒತ್ತಡ ಉಂಟಾದಾಗ ಯಾಂತ್ರಿಕ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ನೋವು ನಿವಾರಕ ಔಷಧಿಗಳಿಂದ ಮತ್ತು ವಿಶ್ರಾಂತಿಯಿಂದ ಹತೋಟಿಗೆ ತರಬಹುದು. ಇನ್ನು, ಬೆನ್ನು ಮೂಳೆಯ ಕ್ಷಯ, ಗಡ್ಡೆ ಅಥವಾ ಗಾಯಗಳಿಂದ ಉಂಟಾಗುವ ದೀರ್ಘ ಕಾಲಿಕ ಬೆನ್ನುನೋವಿಗೆ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ.

 

ಸಮಸ್ಯಾತ್ಮಕ ಬೆನ್ನುಹುರಿಯ ಲಕ್ಷಣಗಳೇನು?

ಅಂಗಾಂಗಗಳಲ್ಲಿ ನೋವು, ಮರಗಟ್ಟುವಿಕೆ,  ಸ್ನಾಯು ದೌರ್ಬಲ್ಯದಂತಹ ಲಕ್ಷಣಗಳನ್ನು ಬೇಗನೇ ಗುರುತಿಸಬಹುದು. ಈ ಲಕ್ಷಣಗಳು ಬೆನ್ನುಹುರಿಯಲ್ಲಿ ಮಾತ್ರವಲ್ಲ, ಕೈ-ಕಾಲು, ಹೆಗಲುಗಳಂತಹ ಇತರ ಭಾಗಗಳಲ್ಲಿಯೂ ಕಂಡುಬರಬಹುದು.ಬೆನ್ನುಹುರಿ ಅಥವಾ ಬೆನ್ನೆಲುಬು ಸಮಸ್ಯೆಗೆ ನಿರ್ದಿಷ್ಟ ಕಾರಣಗಳಿ

ವೆಯೇ?

ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟ. ಆದರೆ ಅಸ್ವಾಭಾವಿಕ ಭಂಗಿ, ಜೀವನ ಶೈಲಿ, ಒತ್ತಡ, ಆಘಾತ, ಅಪಘಾತದಂತಹ ಕಾರಣಗಳನ್ನು ವೈದ್ಯಕೀಯ ಮೂಲಗಳು ಗುರುತಿಸಿವೆ.ದೇಹದ ತೂಕಕ್ಕೂ ಬೆನ್ನು ನೋವಿಗೂ ಸಂಬಂಧವಿದೆಯೇಹೌದು, ನೇರ ಸಂಬಂಧವಿದೆ. ದೇಹದ ಎಲ್ಲಾ ಭಾರವನ್ನು ಹೊರುವ ಶಕ್ತಿಕೇಂದ್ರ ಬೆನ್ನುಮೂಳೆ. ದೇಹದ ತೂಕ ಅಧಿಕವಾದಾಗ ಸಾಮಾನ್ಯವಾಗಿ ಬೆನ್ನುಮೂಳೆ ತೊಂದರೆಗೀಡಾಗುತ್ತದೆ. ಆದ್ದರಿಂದ ನಿಮ್ಮ ಎತ್ತರಕ್ಕೆ ತಕ್ಕ ತೂಕ ಕಾಯ್ದುಕೊಳ್ಳುವುದು ಮುಖ್ಯ.ಮಧ್ಯ ವಯಸ್ಸು ದಾಟಿದ ಮಹಿಳೆಯರಲ್ಲಿ ಬೆನ್ನುನೋವು ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೇನು ಪರಿಹಾರ?ಹೌದು, ಹಾರ್ಮೋನು ವ್ಯತ್ಯಾಸದಿಂದಾಗಿ ಮುಟ್ಟು ನಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಇದಕ್ಕೆ ಪರಿಹಾರವೆಂದರೆ ಕ್ಯಾಲ್ಸಿಯಂ ಅಧಿಕವಿರುವ ಆಹಾರವನ್ನು ಸೇವಿಸಬೇಕು. ಹೆರಿಗೆ ಸಂದರ್ಭದಲ್ಲಿ ಮಹಿಳೆಯರಿಗೆ ಅಧಿಕ ಕ್ಯಾಲ್ಸಿಯಂ ನೀಡಬೇಕು.ಮಕ್ಕಳಲ್ಲಿ ಈ ಸಮಸ್ಯೆಯ ಸಾಧ್ಯತೆ ಇದೆಯೇ?

ಇದೆ, ಮೂಳೆ ರಚನೆಯಲ್ಲಿ ತೊಡಕು ಉಂಟಾದಾಗ ಮಗು ಈ ಸಮಸ್ಯೆಯಿಂದಲೇ ಹುಟ್ಟುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಗರ್ಭಾವಸ್ಥೆಯಲ್ಲಿ ಮಹಿಳೆಗೆ `ಫೊಲಿಕ್ ಆಸಿಡ್~ ಅಂಶವಿರುವ ಔಷಧಿ ಹಾಗೂ ಆಹಾರವನ್ನು ಸೂಚಿಸಲಾಗುತ್ತದೆ.`ವಿಶ್ವ ಬೆನ್ನೆಲುಬು ದಿನ~ದ ಉದ್ದೇಶವೇನು?

ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವುದು, ಉಚಿತ ತಪಾಸಣೆ ಮೂಲಕ ಅವರನ್ನು ಪರೀಕ್ಷೆಗೆ ಒಳಪಡಿಸಿ  ಸಮಸ್ಯೆ ಕಂಡು ಬಂದರೆ ರಿಯಾಯಿತಿ ದರದಲ್ಲಿ ಮುಂದಿನ ಪ್ರಕ್ರಿಯೆಗೆ ಒಳಪಡಿಸುವುದು ಮತ್ತು ಬೆನ್ನೆಲುಬು ಸಂಬಂಧಿತ ತೊಂದರೆಗಳಿಂದ ಜನರನ್ನು ಮುಕ್ತಗೊಳಿಸುವುದು.ಸಮಾಲೋಚನಾ ಶಿಬಿರ

ಇದೇ 16ರಂದು, ಮಂಗಳವಾರ ಸೀತಾ ಬಥೇಜಾ ಆಸ್ಪತ್ರೆಯಲ್ಲಿ ಬೆನ್ನುಹುರಿ ಸಮಸ್ಯೆಗೆ ಉಚಿತ ಸಮಾಲೋಚನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.  ಈ ತಪಾಸಣೆಯಲ್ಲಿ ಗುರುತಿಸಲಾದ ರೋಗಿಗಳಿಗೆ ಡಿಜಿಟಲ್ ಎಕ್ಸರೇ, ಸಿಟಿ ಸ್ಕ್ಯಾನ್, ಶಸ್ತ್ರಚಿಕಿತ್ಸೆ ಮುಂತಾದ ಸೇವೆಗೆ ರಿಯಾಯಿತಿ ನೀಡಲಾಗುತ್ತದೆ.

ಸಂಪರ್ಕಿಸಿ: 080-40302700

email- mail@sbshospital.com

web- www.sbshospital.com

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry