ಮಂಗಳವಾರ, ಮೇ 24, 2022
27 °C

ಇಂದು ವೇಷದ ಹುಲಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ವೇಷದ ಹುಲಿ ಪ್ರದರ್ಶನ

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೃಷ್ಣಾಪುರದೊಡ್ಡಿ: ಮಂಗಳವಾರ `ವೇಷದ ಹುಲಿ~ ನಾಟಕ (ರಚನೆ: ಡಾ.ಎಂ.ಭೈರೇಗೌಡ. ಸಂಗೀತ, ವಿನ್ಯಾಸ, ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ್).ಹಳ್ಳಿಕಾರ ಜನಾಂಗೀಯ ಅಧ್ಯಯನಕ್ಕೆ ಗುಬ್ಬಿ ತಾಲ್ಲೂಕಿನ ಜನ್ನೇನಹಳ್ಳಿಯಲ್ಲಿ ಕ್ಷೇತ್ರಕಾರ್ಯ ಮಾಡುವಾಗ ಸಿಕ್ಕ ಕಥೆಯ ಜಾಡು ಹಿಡಿದು ರಚಿತವಾದ ನಾಟಕ`ವೇಷದ ಹುಲಿ~. 11ನೇ ವಯಸ್ಸಿಗೆ ವಿಧವೆಯಾದ ಚಿಕ್ಕಮಣಮ್ಮ ಹೇಳಿದ ಕಥೆ ಮತ್ತು ಹುಲಿಕಲ್ಲು ಶಾಸನಗಳು ಇದರ ರಚನೆಗೆ ಆಕರಗಳು. ಇದು ಕ್ರಿ.ಶ. ಹದಿನೈದನೇ ಶತಮಾನದಲ್ಲಿ ನಡೆದಿರಬಹುದಾದ ಘಟನೆ.

ಪ್ರಭುತ್ವ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚುವಂತೆ ಜನಸಾಮಾನ್ಯರ ಮದುವೆಯ ವಿಚಾರದಲ್ಲೂ ತಲೆ ಹಾಕಿ, ನಡೆವ ಮದುವೆಗಳನ್ನು ನಿಲ್ಲಿಸಿ ವಧುವನ್ನು ತನ್ನ ವಶಪಡಿಸಿಕೊಳ್ಳುವ  ಹುನ್ನಾರದ ಕಥೆಯಿದು. ವರನ ಕಡೆಯವರು ಬೇಡಿಕೆಗಳನ್ನು ಈಡೇರಿಸುವ ಶಕ್ತಿಯಿದ್ದರೂ ಅಕ್ಕಸಾಲಿಯನ್ನೇ ಅಪರಹರಣ ಮಾಡಿಸುವ ಕೆಲಸವನ್ನು ಈ ಪ್ರಭುತ್ವ ಮಾಡಿಸುತ್ತದೆ.ಇದು ಅಂದಿನ ಸಮಾಜದಲ್ಲಿ ತಲ್ಲಣ ಉಂಟುಮಾಡುತ್ತದೆ. ಅದರಲ್ಲಿ ಮನುಷ್ಯ ಮೃಗವಾಗಿ ಮತ್ತೆ ಮೃಗವೇ ಮನುಷ್ಯನಾಗುವ ಪರಿವರ್ತನೆಯ ಕಥೆಯಿದೆ. ಹೀಗಾಗಿ ವರ್ತಮಾನದ ಎಲ್ಲ ತಲ್ಲಣಗಳನ್ನು ಅನಾವರಣಗೊಳಿಸುತ್ತದೆ.ಸ್ಥಳ: ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ. ಸಂಜೆ 6.30

   

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.