ಶುಕ್ರವಾರ, ಜೂನ್ 25, 2021
29 °C

ಇಂದು ಶಿಡ್ಲಘಟ್ಟದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ನಾಲ್ಕನೇ  ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಮಂಗಳವಾರ ಚಾಲನೆ ದೊರೆಯಲಿದೆ. ಈ ಬಾರಿ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವ ಡಿ.ಟಿ.ಸತ್ಯನಾರಾಯಣ ರಾವ್ ವೃತ್ತಿಯಲ್ಲಿ ವೈದ್ಯರು. ಶಿಡ್ಲಘಟ್ಟದಲ್ಲಿ ಸರ್ಕಾರಿ ವೈದ್ಯರು. ಕೈವಾರ ತಾತಯ್ಯನವರ ರಚನೆಗಳು, ಭಕ್ತಿಗೀತೆಗಳು, ಭಾವಗೀತೆಗಳು ಹಾಗೂ ಸ್ವರಚಿತ ಗೀತೆಗಳನ್ನು ಹಾಡುವ ಹವ್ಯಾಸ ಹೊಂದಿದ್ದಾರೆ.ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ನೀಡುವ ರಿಚ್‌ಮಂಡ್‌ ಫೆಲೋಶಿಪ್‌ ಸೊಸೈಟಿಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ವೇಣುಗೋಪಾಲಸ್ವಾಮಿ ಅಭಿವೃದ್ಧಿ ಟ್ರಸ್ಟ್‌ನ ಸಂಚಾಲಕರಾಗಿ, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಸಾಮಾಜಿಕ ಸೇವೆ­ಯಲ್ಲೂ ತೊಡಗಿದ್ದಾರೆ.ಬೆಳಿಗ್ಗೆ ೮.-೩೦ಕ್ಕೆ ಧ್ವಜಾರೋಹಣದೊಂದಿಗೆ ಆರಂಭ­ವಾಗುವ ಸಮ್ಮೇಳನದಲ್ಲಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾ­ರಂಭ,  ನೀರಾವರಿ ಸ್ಥಿತಿಗತಿ ಕುರಿತು ಗೋಷ್ಠಿ ಹಾಗೂ ಆ ನಂತರ ಕವಿಗೋಷ್ಠಿ ನಡೆಯಲಿದೆ.ಕವಿಗೋಷ್ಠಿ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯುವುದು. ಸಮಾರೋಪ ಸಮಾರಂಭದ ನಂತರ ಸಂಜೆ ಶಾಲೆ– ಕಾಲೇಜು ವಿದ್ಯಾರ್ಥಿಗಳು, ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿ­ದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.