ಬುಧವಾರ, ಜನವರಿ 29, 2020
28 °C

ಇಂದು ಸಚಿವ ಸಂಪುಟ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ವರ್ಷದ ಮೊದಲ ಸಚಿವ ಸಂಪುಟ ಸಭೆ ಮಂಗಳವಾರ ಸಂಜೆ ನಡೆಯಲಿದ್ದು, 9 ನರ್ಸಿಂಗ್ ಮತ್ತು 56 ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡುವುದು ಸೇರಿದಂತೆ ಒಟ್ಟು 50 ವಿಷಯಗಳು ಚರ್ಚೆಗೆ ಬರಲಿವೆ.4,522 ಕೋಟಿ ರೂಪಾಯಿ ವಿಶ್ವಬ್ಯಾಂಕ್ ನೆರವಿನ ಕೆಶಿಪ್-2 ಮೊದಲ ಹಂತದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡುವುದು, ಎನ್‌ಜಿಇಎಫ್‌ಗೆ ಸೇರಿದ ಜಾಗದಲ್ಲಿ ಹೈಕೋರ್ಟ್ ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣ ಮಾಡುವ ವಿಷಯವೂ ಇದರಲ್ಲಿ ಸೇರಿದೆ.ಮೆಟ್ರೊ ಎರಡನೇ ಹಂತದ ಯೋಜನೆಯ ವಿಸ್ತರಣೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕುಡಿಯುವ ನೀರಿನ ಯೋಜನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ರೂಪಿಸಿರುವ ಹೊಸ ನೀತಿಗೆ ಅನುಮೋದನೆ, ಉದ್ಯೋಗ ಮತ್ತು ತರಬೇತಿ ಇಲಾಖೆ, ರಾಜ್ಯ ವಿಮಾ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಪ್ರತಿಕ್ರಿಯಿಸಿ (+)