ಇಂದು ಸಚಿವ ಸಂಪುಟ ಸಭೆ

7

ಇಂದು ಸಚಿವ ಸಂಪುಟ ಸಭೆ

Published:
Updated:

ಬೆಂಗಳೂರು: ನಿವೃತ್ತ ಭೂ ಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ, ಬಿಡಿಎಗೆ ನೀಡಿದ್ದ ನಿರಾಶ್ರಿತರ ಪರಿಹಾರ ಕೇಂದ್ರದ ಜಾಗವನ್ನು ಹಿಂದಕ್ಕೆ ಪಡೆಯುವುದು ಸೇರಿದಂತೆ 22 ವಿಷಯಗಳು ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿವೆ.ಕೋಲಾರ ಜಿಲ್ಲೆಯ ನರಸಾಪುರದ ಬಳಿ ಆರಂಭವಾಗುತ್ತಿರುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್‌ನ ಬಂಡವಾಳ ಹೂಡಿಕೆ ಪ್ರಸ್ತಾವಕ್ಕೆ ವಿಶೇಷ ರಿಯಾಯಿತಿ ಮತ್ತು ಸೌಲಭ್ಯಗಳನ್ನು ನೀಡುವುದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ ಸ್ಥಾಪಿಸುವ ವಿಷಯವೂ ಇದರಲ್ಲಿ ಸೇರಿದೆ.ಕೆಲ ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಮರುನೇಮಕ ಮಾಡಿಕೊಳ್ಳುವುದು, ರಸ್ತೆ ಕಾಮಗಾರಿಗಳಿಗೆ ಅನುಮೋದನೆ, ಕೆಎಚ್‌ಬಿ ಸಿಬ್ಬಂದಿಗೆ ವಸತಿ ಯೋಜನೆ  ಸೇರಿದಂತೆ ಹಲವು ವಿಷಯಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry