ಇಂದು ಸಮೂಹ ನೃತ್ಯ ರಸಪ್ರಶ್ನೆ ಸ್ಪರ್ಧೆ

7

ಇಂದು ಸಮೂಹ ನೃತ್ಯ ರಸಪ್ರಶ್ನೆ ಸ್ಪರ್ಧೆ

Published:
Updated:

ಬೆಂಗಳೂರು: `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಬಳಗವು ಫೆ. 24 ಮತ್ತು 25 ರಂದು ಬೆಳಿಗ್ಗೆ 10 ಗಂಟೆಗೆ  ವಿಠಲಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಶಾಲಾ ಆವರಣದಲ್ಲಿ ಅಂತರಕಾಲೇಜು `ಬ್ರೈನ್ಸ್ ಎನ್ ಬೀಟ್ಸ್~ ರಸಪ್ರಶ್ನೆ ಮತ್ತು ಸಮೂಹ ನೃತ್ಯ  ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕರ್ನಾಟಕ ಕ್ವಿಜ್ ಅಸೋಸಿಯೇಷನ್ ಉಪಾಧ್ಯಕ್ಷ ಅರುಲ್ ಮಾನಿ ಅವರು 24 ರಂದು ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.  25 ರಂದು ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು  ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ವಿಭಾಗಗಳಲ್ಲಿ ನಡೆಯಲಿದ್ದು, ಅದೇ ದಿನದಂದು ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಬ್ರಾಂಡ್ ಫ್ಯಾಕ್ಟರಿ ಪ್ರಾಯೋಜಿಸಿದ್ದು, ಸ್ಲ್ಪಾಷ್ ಮತ್ತು ಬಿಎಸ್‌ಎನ್‌ಎಲ್ ಬಹುಮಾನಗಳ ಪ್ರಾಯೋಜಕತ್ವ ವಹಿಸಿಕೊಂಡಿವೆ. ಸ್ಪರ್ಧೆಯಲ್ಲಿ 40 ಕಾಲೇಜು ಗಳಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry