ಬುಧವಾರ, ನವೆಂಬರ್ 13, 2019
23 °C

`ಇಂದ್ರಮ್ಮನ ಮೊಮ್ಮಗ ಬರ‌್ತಾನಂತಲಪ!'

Published:
Updated:

ಸಿಂಧನೂರು: ಭಾರತ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಸಿಂಧನೂರಿಗೆ ಆಗಮಿಸುತ್ತಿರುವ ಸುದ್ದಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ತಲುಪಿಸಿದ್ದು, ಈಗ ಎಲ್ಲರ ಬಾಯಲ್ಲೂ ಯುವರಾಜ ರಾಹುಲ್‌ಗಾಂಧಿಯದೇ ಮಾತು. ಹೊಟೇಲ್, ಅಗಸಿಕಟ್ಟೆ, ಛಾವಡಿಯಲ್ಲಿ ಗುಂಪು ಗುಂಪಾಗಿ ಕುಳಿತು ಮಾತನಾಡುತ್ತಿರುವುದು ಸಾಮಾನ್ಯವಾಗಿದೆ.`ಮೂವ್ವತ್ತು ವರ್ಷದ ಹಿಂದೆ ಇಂದ್ರಮ್ಮ ಚಿನ್ನೂರಿಗೆ ಬಂದಿದ್ಲು. ನೋಡಿ ಬಂದಿದ್ವಿ. ಈಗ ಮೊಮ್ಮಗನ ಒಂದ್ಸಾರಿ ತೋರಿಸಕಂಡ ಬಂದಬುಡಪ. ಹೆಂಗ್ ಅದ್ಯಾನ ನೋಡ್ತೀನಿ' ಎಂದು ತಾಲ್ಲೂಕಿನ ಚಿರತ್ನಾಳ ಗ್ರಾಮದ ಹನುಮಮ್ಮ ಎನ್ನುವ ಅಜ್ಜಿ ಮೊಮ್ಮಗ ಮಾನಯ್ಯನಿಗೆ ಹೇಳಿದ ಮಾತಿದು.

ಮಾನಯ್ಯನಿಗೆ ಹೇಳಿದ ಮಾತನ್ನು ಮೆಲುಕು ಹಾಕಿದಾಗ; 1983ರಲ್ಲಿ ಇಂದಿರಾಗಾಂಧಿ ಸಿಂಧನೂರಿನ ಪೊಲೀಸ್ ಸ್ಟೇಶನ್ ಹಿಂಭಾಗದಲ್ಲಿ ಚುನಾವಣಾ ಪ್ರಚಾರಾರ್ಥ ಹಾಕಿದ್ದ ಶಾಮಿಯಾನದಲ್ಲಿ ಬಾಷಣ ಮಾಡಿದ ಸಂಗತಿ ತಿಳಿದು ಬಂತು. ಹಾಗೆಯೇ ಅದಕ್ಕೂ ಮುಂಚೆ 1978ರಲ್ಲಿಯೂ ಸಿಂಧನೂರಿಗೆ ಬಂದಿದ್ದ ಇಂದಿರಾಗಾಂಧಿ ದೇವರಾಜು ಅರಸು ಮಾರುಕಟ್ಟೆ ಬಯಲು ಜಾಗೆಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ್ದರಂತೆ.1978 ಮತ್ತು 83ರಲ್ಲಿ ಮಾಜಿ ಶಾಸಕ ಆರ್.ನಾರಾಯಣಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು. 30 ವರ್ಷಗಳ ನಂತರ ಇಂದಿರಾಗಾಂಧಿಯ ಮೊಮ್ಮಗ ರಾಹುಲ್‌ಗಾಂಧಿ ಏಪ್ರಿಲ್ 23ರಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ವೀಕ್ಷಣೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನತೆ ಹರಿದು ಬರಲಿದ್ದು, ಈಗಾಗಲೇ ನಗರದ ಪಿಡಬ್ಲ್ಯೂಡಿ ಕ್ಯಾಂಪ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. 30ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಆಗಮಿಸಬಹುದೆಂದು ಕೊಪ್ಪಳ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರ

ಪ್ರತಿಕ್ರಿಯಿಸಿ (+)