ಸೋಮವಾರ, ಜೂನ್ 14, 2021
22 °C

ಇಂಧನ ಸಚಿವರ ಕ್ಷೇತ್ರದಲ್ಲೇ ಕತ್ತಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪಟ್ಟಣದಲ್ಲಿ ಶನಿ­ವಾರ ರಾತ್ರಿ ಮಳೆ ಬಂದ ಕಾರಣ ಇಡೀ ರಾತ್ರಿ ಎಲ್ಲೆಡೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗಿತ್ತು. ಇದರಿಂದಾಗಿ ಜನತೆ ಕತ್ತಲೆ­ಯಲ್ಲೇ ರಾತ್ರಿ ಕಳೆಯುತ್ತಾ ಬೆಸ್ಕಾಂ­ ಇಲಾಖೆಗೆ ಹಿಡಿಶಾಪ ಹಾಕಿದರು.ಭಾನುವಾರವೂ  ದಿನವಿಡೀ ವಿದ್ಯುತ್ ಕಣ್ಣಾಮುಚ್ಚಾಲೆ ಆಡು­ತ್ತಲೇ ಇತ್ತು. ಇದು ಜನರ ಆಕ್ರೋ­­­ಶ­­ವನ್ನು ಇಮ್ಮಡಿ­ಗೊಳಿ­ಸಿತ್ತು. ‘ವಿದ್ಯುತ್ ಸಮಸ್ಯೆ ಎದು­ರಾ­­ದಾಗ ಬದಲಿ ಮಾರ್ಗದಲ್ಲಿ ವಿದ್ಯುತ್‌ಪೂರೈಸಲು ಬೆಸ್ಕಾಂ ಇಲಾ­ಖೆ­ಯು ಎ.ಬಿ.ಸಿ.ಕೇಬಲ್ಲನ್ನು ಅಳವಡಿಸಿದೆ. ಆದರೆ ಇಂತಹ ವ್ಯವಸ್ಥೆಯನ್ನು ಬಳಕೆ ಮಾಡದೆ ಅಧಿಕಾರಿಗಳು ಇಡೀ ಪಟ್ಟಣ­ವನ್ನೇ ಕತ್ತಲಲ್ಲಿ ಇಟ್ಟಿದ್ದರು. ಇಂಧನ ಸಚಿವ ಡಿ.ಕೆ ಶಿವ­ಕುಮಾರ್‌ ಊರಿನಲ್ಲೇ ಹೀಗೆ’ ಎಂದು ಜನತೆ ಗೊಣಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.