ಇಕ್ಕೇರಿ ಪ್ರೌಢಶಾಲೆಗೆ ಶೇ 100 ಫಲಿತಾಂಶ

7

ಇಕ್ಕೇರಿ ಪ್ರೌಢಶಾಲೆಗೆ ಶೇ 100 ಫಲಿತಾಂಶ

Published:
Updated:

ಶಿವಮೊಗ್ಗ: ಸಾಗರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಎಡಜಿಗಳೇಮನೆಯ ಕನ್ನಡ ಮಾಧ್ಯಮ ಇಕ್ಕೇರಿ ಪ್ರೌಢಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ.

ಪರೀಕ್ಷೆ  ಬರೆದಿದ್ದ 42 ವಿದ್ಯಾರ್ಥಿಗಳಲ್ಲಿ ಇಬ್ಬರು ಉನ್ನತಶ್ರೇಣಿ ಹಾಗೂ 20 ಮಕ್ಕಳು ಪ್ರಥಮದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಜಿ.ಕೆ. ಬಿಂದು 591 ಅಂಕ ಪಡೆದು ಶೇ 94.56ರ ಸಾಧನೆ ಮಾಡಿದ್ದರೆ, ಎ.ಜಿ. ಅಕ್ಷರ 563 ಅಂಕಗಳೊಂದಿಗೆ  ಶೇ 90.08ರ ಫಲಿತಾಂಶ ಪಡೆದಿದ್ದಾನೆ.

ಇದೇ ಪ್ರಥಮ ಬಾರಿಗೆ ಇಕ್ಕೇರಿ ಪ್ರೌಢಶಾಲೆಗೆ ಪೂರ್ಣ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗವನ್ನು ಶಾಲೆಯ ಆಡಳಿತ ಸಮಿತಿ ಅಭಿನಂದಿಸಿದೆ.

ಹಾರನಹಳ್ಳಿ ಗ್ರಾಮಾಂತರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ: ಎಸ್ಸೆಸ್ಸೆಲ್ಸಿಯಲ್ಲಿ ಶೇ 98ರಷ್ಟು ಫಲಿತಾಂಶ ಬಂದಿದೆ.

ಒಟ್ಟು 62 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 61 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

27 ಪ್ರಥಮ ದರ್ಜೆ, 16 ದ್ವಿತೀಯ ಹಾಗೂ 18 ತೃತೀಯದರ್ಜೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry