ಸೋಮವಾರ, ಜೂನ್ 21, 2021
29 °C

ಇಕ್ಬಾಲ್ ನಿವಾಸ 7.5 ಕೋಟಿಗೆ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್ (ಪಿಟಿಐ): ತಲೆಮರೆಸಿಕೊಂಡಿರುವ ಮಾದಕವಸ್ತು ಕಳ್ಳಸಾಗಣೆದಾರ ಇಕ್ಬಾಲ್ ಮಿರ್ಚಿಗೆ ಸೇರಿದ ಐಷಾರಾಮಿ ನಿವಾಸವನ್ನು ಸರ್ಕಾರ 7.5 ಕೋಟಿ ರೂಪಾಯಿಗೆ ಹರಾಜು ಹಾಕಿತು.

 

`ಅಂಗ್ರೇಜಾನ್ ಕ ಬಂಗ್ಲ~ ಎಂದೇ ಪ್ರಸಿದ್ಧಿಯಾಗಿದ್ದ ಈ ಕಟ್ಟಡ ನಗರದ ಶ್ಯಾಮಲಾ ಹಿಲ್ಸ್‌ನ ನಾದಿರ ಕಾಲೋನಿಯಲ್ಲಿದೆ. ಶನಿವಾರ ನಡೆದ ಹರಾಜಿನಲ್ಲಿ ಮುಂಬೈ ಮೂಲದ ಕಂಪೆನಿಯೊಂದು ಔಷಧ ತಯಾರಿಕೆ ಉದ್ಯಮ ಸ್ಥಾಪನೆಗಾಗಿ ಈ ಕಟ್ಟಡವನ್ನು ಖರೀದಿಸಿತು ಎಂದು ಮೂಲಗಳು ತಿಳಿಸಿವೆ. ಈ ಕಟ್ಟಡವನ್ನು ಎಸ್‌ಎಎಇಎಂಎ ಕಾಯ್ದೆಯಡಿ ಮಾರಾಟ ಮಾಡಲಾಗಿದೆ.ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ 1991ರಲ್ಲಿ ತನ್ನ ಪತ್ನಿಯ ಹೆಸರಲ್ಲಿ ಈ ಕಟ್ಟಡವನ್ನು ಖರೀದಿಸಿದ್ದ. 1998ರಲ್ಲಿ ಟಿ-ಸಿರೀಸ್ ಸಂಗೀತ ಸಂಸ್ಥೆಯ ಮಾಲೀಕ ಗುಲ್ಷನ್ ಕುಮಾರ್ ಹತ್ಯೆಯ ಆರೋಪಿ ಅಬ್ದುಲ್ಲಾನ ಶವ ಈ ನಿವಾಸದಲ್ಲಿ ಪತ್ತೆಯಾಗಿತ್ತು. ಆ ನಂತರ ಈ ಕಟ್ಟಡ ಸುದ್ದಿಯಲ್ಲಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2004-05ರಲ್ಲಿ ಕಸ್ಟಮ್ಸ ಮತ್ತು ಅಬಕಾರಿ ಅಧಿಕಾರಿಗಳು ಈ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.