ಇಗ್ನೊ: ಕಿವುಡರಿಗಾಗಿ ಪದವಿ ಕೋರ್ಸ್‌ಗಳು

7

ಇಗ್ನೊ: ಕಿವುಡರಿಗಾಗಿ ಪದವಿ ಕೋರ್ಸ್‌ಗಳು

Published:
Updated:

ನವದೆಹಲಿ (ಐಎಎನ್‌ಎಸ್): ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತವಿದ್ಯಾಲಯ (ಐಜಿಎನ್‌ಒಯು-ಇಗ್ನೊ)ವು ಕಿವುಡರಿಗಾಗಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಕೋರ್ಸ್‌ಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಿದೆ ಎಂದು ವಿವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭಾರತೀಯ ಸಂಜ್ಞಾ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರದ (ಐಎಸ್‌ಎಲ್‌ಆರ್‌ಟಿಸಿ) ಅಡಿಯಲ್ಲಿ ಈ ಕೋರ್ಸ್‌ಗಳು ಆರಂಭವಾಗಲಿವೆ.ಇಗ್ನೊ ಆವರಣದಲ್ಲಿ ಭಾನುವಾರ ನಡೆದ ಸಂಜ್ಞಾ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಮೊದಲ ಸಂಸ್ಥಾಪನಾ ದಿನದಂದು ಈ ಕೋರ್ಸ್ ಆರಂಭಿಸುವ ವಿಚಾರವನ್ನು ಪ್ರಕಟಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry