ಶುಕ್ರವಾರ, ನವೆಂಬರ್ 22, 2019
26 °C

`ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತ'

Published:
Updated:

ಕಮಲಶಿಲೆ(ಸಿದ್ದಾಪುರ): ಭಾರತದಲ್ಲಿ ಜನರ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದ್ದು,  ಭಾರತದ ಸಮಗ್ರ ಸಂಪನ್ಮೂಲ ಸದ್ಬಳಕೆ ಆಗುತ್ತಿಲ್ಲ. ಇದು ಕೇವಲ ಕೆಲವೇ ವ್ಯಕ್ತಿಗಳ ಪಾಲಾ ಗುತ್ತಿದ್ದು,  ಮಾನವ ಸಂಪನ್ಮೂಲದಲ್ಲಿ ಜಪಾನ್ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ ಎಂದು ಕುಂದಾಪುರದ ಬೇಳೂರಿನ ಸ್ಫೂರ್ತಿ ಸಂಸ್ಥೆಯ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೇಶವ ಕೊಟೇಶ್ವರ ಹೇಳಿದರು.ಸಿದ್ದಾಪುರ ಸಮೀಪದ ಕಮಲಶಿಲೆ ದೇವಳದ ಸಭಾಂಗಣದಲ್ಲಿ ಸೋಮ ವಾರ ನಡೆದ ಗ್ರಾಮೀಣ ವಿಶೇಷ ಶಿಬಿರ -2013 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ `ಸಮುದಾ ಯದ ಅಭಿವೃದ್ಧಿಯಲ್ಲಿ ಸರಕಾರೇತರ ಸಂಸ್ಥೆಗಳ ಪಾತ್ರ' ಕುರಿತು ಮಾತನಾಡಿ ದರು. ವ್ಯಕ್ತಿಯ ಶಿಕ್ಷಣ ಮಟ್ಟ ಮತ್ತು ವ್ಯಕ್ತಿತ್ವ ವಿಕಸನದಿಂದ ಸುಧಾರಿತ ಜೀವನವೇ ಅಭಿವೃದ್ಧಿ ಎನ್ನಬಹುದು ಎಂದರು.ಸಾಮಾನ್ಯವಾಗಿ ಬಡವರಿಗೆ ಶಿಕ್ಷಣದ ಮಹತ್ವ ತಿಳಿದಿಲ್ಲ. ಇದನ್ನು ತಿಳಿ ಹೇಳುವ ಪ್ರಯತ್ನವನ್ನು ವಿದ್ಯಾರ್ಥಿಗಳು  ಮಾಡಬೇಕು, ಯಾವುದೇ ಕುಟುಂಬ ಗಳಿಗೆ ಸರ್ಕಾರಗಳು ನೀಡುವ ಉಚಿತ ಕೊಡುಗೆಯಿಂದ ಅಭಿವೃದ್ಧಿ ಕುಂಠಿತವಾಗಿರುತ್ತದೆ. ಸರ್ಕಾರ ಅಲ್ಲದೇ ಸರ್ಕಾರೇತರ ಸಂಸ್ಥೆಗಳು ಪೋಲಿಯೋವನ್ನು ಸಂಪೂರ್ಣವಾಗಿ ನಿರ್ಮೂಲ ಗೊಳಿಸಿವೆ ಎಂದರು. ರೋಟರಿ ಸಮುದಾಯ ದಳ ಮಾನಂಜೆ ಅಧ್ಯಕ್ಷ ಶ್ರೀನಿವಾಸ ಭಟ್ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು.ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರನಾರಾಯಣ ಚಾತ್ರ, ರುಕ್ಮಿಣಿ ಶೆಡ್ತಿ ಸ್ಮಾರಕ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ರಂಜಿತ್ ವೇದಿಕೆಯಲ್ಲಿದ್ದರು. ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವ ವಿದ್ಯಾಲಯ ಸಮಾಜ ಕಾರ್ಯ ವಿಭಾಗ, ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಸರ್ಕಾರಿ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು.ಶಿಬಿರವು ಭಾನುವಾರ ಉದ್ಘಾಟನೆಯಾಗಿದ್ದು, ಕಮಲಶಿಲೆ ದೇವಳದ ಅನುವಂಶಿಕ ಜೊತೆ ಮೊಕ್ತೇಸರ ಶ್ರೀನಿವಾಸ ಚಾತ್ರ ಉದ್ಘಾಟಿಸಿದರು. ಬಾರ್ಕೂರು ಕಾಲೇಜು ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಸಿ. ಕುಂದಾಪುರದ ವಕೀಲ ರವಿಕಿರಣ್ ಮುರ್ಡೆಶ್ವರ, ಅಧ್ಯಯನ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕೆ, ಕಮಲಶಿಲೆ ದೇವಳದ ಮೊಕ್ತೆಸರ ಶೆಟ್ಟಿಪಾಲ್ ಸಚ್ಚಿದಾನಂದ ಚಾತ್ರ  ಉಪಸ್ಥಿತರಿದ್ದರು. ಏಪ್ರಿಲ್ 4ರವರೆಗೆ ಶಿಬಿರ ನಡೆಯಲಿದ್ದು, ಗ್ರಾಮ ನೈರ್ಮಲ್ಯ, ದೇವಳ ವಠಾರ ಸ್ವಚ್ಛತೆ, ಪರಿಸರ ಪ್ರಜ್ಞೆ, ಹಕ್ಕು ಬಾದ್ಯತೆ ಅರಿವು, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ವೃದ್ಧಿ, ಆರೋಗ್ಯ ಅರಿವು ಮತ್ತು ಗ್ರಾಮೀಣ ಸಮಸ್ಯೆಗಳ ಅಧ್ಯಯನ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿಕ್ರಿಯಿಸಿ (+)