ಇಟಲಿಯಲ್ಲಿ ಭೂಕಂಪನ: 6 ಸಾವು

7

ಇಟಲಿಯಲ್ಲಿ ಭೂಕಂಪನ: 6 ಸಾವು

Published:
Updated:
ಇಟಲಿಯಲ್ಲಿ ಭೂಕಂಪನ: 6 ಸಾವು

ರೋಮ್ (ಎಎಫ್‌ಪಿ): ಉತ್ತರ ಇಟಲಿಯಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಅ್ಟಉ ಜನರು ಮೃತಪಟ್ಟು 50ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.ಭೂಕಂಪನದಿಂದಾಗಿ ಆತಂಕಿತರಾದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿ ಬಂದರು ಎಂದು ತುರ್ತು ಸೇವೆಗಳ ಇಲಾಖೆ ಹೇಳಿದೆ.ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 7.30ರ ಸುಮಾರಿಗೆ ಇದು ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9ರಷ್ಟು ದಾಖಲಾಗಿತ್ತು.  ಭೂಕಂಪನದ ಕೇಂದ್ರ ಬಿಂದು ಫಿನಾಲೆ ಎಮಿಲಿಯಾ ಎಂಬ ಪ್ರದೇಶದಲ್ಲಿ ಭೂಮಿಯ 10 ಕಿ.ಮೀ ಆಳದಲ್ಲಿ ದಾಖಲಾಗಿತ್ತು.ಉತ್ತರ ಇಟಲಿಯಾದ್ಯಂತ 20 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ನಂತರ  ಹಲವು ಬಾರಿ ಭೂಮಿ ನಡುಗಿದೆ ಎಂದು ತುರ್ತು ಸೇವೆಗಳ ಇಲಾಖೆ ಹೇಳಿದೆ. ಮೊಡೆನಾ ಪ್ರಾಂತ್ಯದಲ್ಲಿ 50 ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ ಎಂದೂ ಅದು ಹೇಳಿದೆ.ಇದಕ್ಕಿಂತಲೂ ಮೊದಲು, ಇಟಲಿಯ ವಾಣಿಜ್ಯ ರಾಜಧಾನಿ ಮಿಲನ್ ಸಮೀಪದ ಲೋಂಬಾರ್ಡಿ ಪ್ರಾಂತ್ಯದಲ್ಲಿ  4.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು.

 

 ಜಪಾನ್‌ನಲ್ಲಿ ಕಂಪನ

ಟೋಕಿಯೊ:
ಜಪಾನ್‌ನಲ್ಲಿ ಭಾನುವಾರ ಎಂಟು ನಿಮಿಷಗಳ ಆಂತರದಲ್ಲಿ ಎರಡು ಬಾರಿ ಭೂಕಂಪನ ಉಂಟಾಗಿದ್ದು, ಕಂಪನ ತೀವ್ರತೆಯ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು ಎಂದು ಭೂಕಂಪನ ಶಾಸ್ತ್ರಜ್ಞ ಇಲಾಖೆ ಹೇಳಿದೆ. 

ಭೂಕಂಪನದ ಕೇಂದ್ರ ಬಿಂದು ಜಪಾನ್ ಈಶಾನ್ಯ ಪೆಸಿಫಿಕ್ ಸಾಗರದಲ್ಲಿ  ದಾಖಲಾಗಿತ್ತು. ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry