ಸೋಮವಾರ, ಮೇ 17, 2021
25 °C

ಇಟಲಿ ಕರಾವಳಿ ಪಡೆಯಿಂದ 159 ವಲಸಿಗರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮ್ (ಎಎಫ್‌ಪಿ): ಮುಳುಗುತ್ತಿದ್ದ ದೋಣಿಯಿಂದ ನವಜಾತ ಶಿಶು ಹಾಗೂ ಏಳು ಮಕ್ಕಳು ಸೇರಿದಂತೆ ಸಿರಿಯಾ, ಆಫ್ಘಾನಿಸ್ತಾನ ಹಾಗೂ ಈಜಿಪ್ಟ್‌ನ 159 ವಲಸಿಗರನ್ನು ಇಟಲಿ ಕರಾವಳಿ ರಕ್ಷಣಾ ಪಡೆಯ ಭದ್ರತಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.ವಲಸಿಗರು ಕೆಲವು ದಿನಗಳ ಹಿಂದೆ ಟರ್ಕಿಯಿಂದ ಹೊರಟಿದ್ದರು. ದಕ್ಷಿಣ ಇಟಲಿಯ ರೊಸೆಲ್ಲಾ ಜೋನಿಕ ಕಡಲ ತೀರದ ಬಳಿ ದೋಣಿ ಮಗುಚುವ ಸ್ಥಿತಿಯ್ಲ್ಲಲಿತ್ತು. ಇದನ್ನು ಗಮನಿಸಿದ ಇಟಲಿ ನೌಕಾ ಸಿಬ್ಬಂದಿ ಕೂಡಲೇ ಪ್ರಯಾಣಿಕರ ರಕ್ಷಣೆಗೆ ಧಾವಿಸಿದರು. ಘಟನೆಯಲ್ಲಿ ಗಾಯಗೊಂಡ ನಾಲ್ವರು ವಲಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.