ಇಟಲಿ ನೌಕಾ ಸಿಬ್ಬಂದಿಗೆ ಷರತ್ತುಬದ್ಧ ಜಾಮೀನು

7

ಇಟಲಿ ನೌಕಾ ಸಿಬ್ಬಂದಿಗೆ ಷರತ್ತುಬದ್ಧ ಜಾಮೀನು

Published:
Updated:

ಕೊಚ್ಚಿ (ಪಿಟಿಐ): ಇಬ್ಬರು  ಭಾರತೀಯ ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಇಟಲಿ ನೌಕಾ ಪಡೆಯ ಇಬ್ಬರು ಸಿಬ್ಬಂದಿಗೆ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಲಾತೊರ್ ಮಾಸ್ಸಿಮಿಲ್ಲಿಯಾನೊ ಹಾಗೂ ಸಾಲವತೊರ್ ಗಿರೊನ್ ಎಂಬ ಈ ಇಬ್ಬರು ನೌಕಾಪಡೆಯ ಸಿಬ್ಬಂಧಿ ವಿರುದ್ಧ ದಾಖಲಾದ ಎಫ್ಐಆರ್ ರದ್ಧಗೊಳಿಸುವಂತೆ ಕೋರಿದ್ದ ಇಟಲಿಯ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲವು ಒಂದು ದಿನದ ನಂತರ ಈ ಆದೇಶ ನೀಡಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ಎನ್.ಕೆ.ಬಾಲಕೃಷ್ಣನ್ ಅವರು ಆರೋಪಿಗಳಿಗೆ ತಲಾ ಒಂದು ಕೋಟಿ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಮೊತ್ತಕ್ಕೆ ಇಬ್ಬರು ಭಾರತೀಯರ ಜಾಮೀನು ನೀಡಬೇಕೆಂಬ ಷರತ್ತು ವಿಧಿಸಿತು.

ಜೈಲಿನಿಂದ ಬಿಡುಗಡೆಗೊಂಡ ನಂತರ ಕೊಚ್ಚಿ ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲೇ ಉಳಿದುಕೊಳ್ಳಬೇಕು. ಪ್ರತಿನಿತ್ಯ ಬೆಳಿಗ್ಗೆ 10ರಿಂದ 11ರೊಳಗೆ ಕಮಿಷನರ್ ಎದುರು ಹಾಜರಾಗಬೇಕು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿತು.

ನೌಕಾ ಸಿಬ್ಬಂಧಿಯು ತಮ್ಮ ಮೊಬೈಲ್ ಸಂಖ್ಯೆ ಇದ್ದಲ್ಲಿ ಅದನ್ನು ನೀಡಬೇಕು ಹಾಗೂ ಕಮಿಷನರ್ ಕಚೇರಿ ವ್ಯಾಪ್ತಿಯನ್ನು ಮೀರಿ ಹೊರಹೋಗುವಂತಿಲ್ಲ. ದೇಶ ಬಿಟ್ಟು ಹೊರಹೋಗುವಂತಿಲ್ಲ. ಜಾಮೀನಿಗೆ ಸಹಿ ಹಾಕುವ ಇಬ್ಬರು ಭಾರತೀಯರು ತಮ್ಮ ಭಾವಚಿತ್ರ ಇರುವ ಅಧಿಕೃತ ಗುರುತಿನ ಚೀಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಜತೆಗೆ ಇಬ್ಬರು ನೌಕಾ ಸಿಬ್ಬಂದಿ ತಮ್ಮ ಪಾಸ್ ಪೋರ್ಟ್ ಅನ್ನು ಕೊಲ್ಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು.

ಜಾಮೀನು ನೀಡುವ ಮುನ್ನ ವಿದೇಶ ನೋಂದಣಿ ಅಧಿಕಾರಿ ನೀಡಿದ ಸರಿಯಾದ ಪ್ರಯಾಣ ದಾಖಲೆ, ವಿಸಾ ನೀಡುವುದು ಅತ್ಯಗತ್ಯ ಎಂದು ನ್ಯಾಯಮೂರ್ತಿ ಬಾಲಕೃಷ್ಣ ಅವರು ಸೂಚಿಸಿದರು.


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry