ಇಟಲಿ ಸೈನಿಕರಿಗೆ ಕ್ರಿಸ್‌ಮಸ್ ರಜೆಗೆ ತೆರಳಲು ಕೋರ್ಟ್ ಅನುವತಿ

7

ಇಟಲಿ ಸೈನಿಕರಿಗೆ ಕ್ರಿಸ್‌ಮಸ್ ರಜೆಗೆ ತೆರಳಲು ಕೋರ್ಟ್ ಅನುವತಿ

Published:
Updated:

ತಿರುವನಂತಪುರ (ರಾಯಿಟರ್ಸ್‌): ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ  ಬಂಧಿತರಾಗಿರುವ ಇಟಲಿಯ ಇಬ್ಬರು ನೌಕಪಡೆ ಸೈನಿಕರಿಗೆ ಕ್ರಿಸ್ ರಜೆಗೆ  ತೆರಳಲು ಕೇರಳ ಕೋರ್ಟ್ ಅನುಮತಿ ನೀಡಿದೆ.ಕ್ರಿಸ್‌ಮಸ್ ರಜೆಗೆ ತೆರಳಲು ಅವಕಾಶ ಕಲ್ಪಿಸುವಂತೆ ಕೋರಿ ಇಟಲಿಯ ನೌಕಪಡೆ ಸೈನಿಕರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಪೀಠ ಇಟಲಿಗೆ ತೆರಳಲು ಅವಕಾಶ ಕಲ್ಪಿಸಿದೆ.ಕಳೆದ ಫೆಬ್ರುವರಿ ತಿಂಗಳಲ್ಲಿ ಕೇರಳ ಕರಾವಳಿ ತೀರದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಕೊಂದ ಆರೋಪದಡಿಯಲ್ಲಿ ಈ ಇಬ್ಬರು ನೌಕಾ ಪಡೆ ಸೈನಿಕರನ್ನು ಬಂಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry