ಶನಿವಾರ, ಮೇ 8, 2021
26 °C

ಇಟಾಲಿಯನ್ ಕ್ವಿಜ್ ಗೆದ್ದ ಕುಮಾರನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಟಲಿಯ ಸಂಸ್ಕೃತಿ ಬಗ್ಗೆ ಅರಿವು, ಆಸಕ್ತಿ ಮೂಡಿಸಲು ಇಟಲಿ ರಾಯಭಾರ ಕಚೇರಿ, ಇಸ್‌ಟ್ಯುಟೊ ಇಟಾಲಿಯಾನೊ ಡಿ ಕಲ್ಚುರಾ ಮತ್ತು ಸಿದ್ಧ ಆಹಾರ ಬ್ರಾಂಡ್ ಡೆಲ್ ಮಾಂಟ್ ಪ್ರಾಯೋಜಕತ್ವದಲ್ಲಿ ದೇಶದ 10 ನಗರಗಳಲ್ಲಿ `ಕ್ವಿಜ್ ಇಟಾಲಿಯಾ~ ರಸಪ್ರಶ್ನೆ ಆಯೋಜಿಸಲಾಗಿತ್ತು.ಬೆಂಗಳೂರಿನಲ್ಲಿ ಕ್ವಿಜ್‌ಮಾಸ್ಟರ್ ಕುನಾಲ್ ಸಾವರ್ಕರ್ ರಸಪ್ರಶ್ನೆ ನಡೆಸಿಕೊಟ್ಟರು. ಇದರಲ್ಲಿ ಪಾಲ್ಗೊಂಡಿದ್ದ 78 ಶಾಲಾ ತಂಡಗಳ ವಿದ್ಯಾರ್ಥಿಗಳು ಇಟಲಿ ದೇಶ ಕುರಿತ ಸರಣಿ ಪ್ರಶ್ನೆಗಳಿಗೆ ಉತ್ತರ ನೀಡಿದರು.ಕ್ವಿಜ್‌ನಲ್ಲಿ ಇಟಲಿ ದೇಶದ ಇತಿಹಾಸ, ಸಂಸ್ಕೃತಿ, ವಿಶ್ವ ಅಭಿವೃದ್ಧಿಗೆ ಇಟಲಿಯ ಕೊಡುಗೆ, ಲಲಿತ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಸಿನೆಮಾ, ಫ್ಯಾಷನ್, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಜಾನಪದ ಮೊದಲಾದ ವಿಷಯ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಕ್ವಿಜ್‌ಗೆ ಮುನ್ನ ಸ್ಪರ್ಧಿಗಳಿಗೆ 20 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆಪತ್ರಿಕೆ ಬಿಡಿಸಲು ಸೂಚಿಸಲಾಯಿತು. ಇದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 6 ತಂಡಗಳು ಮುಂದಿನ ಸುತ್ತಿಗೆ ಆಯ್ಕೆಯಾದವು.ಎರಡನೇ ಹಂತದಲ್ಲಿ ನಡೆದ ಸ್ಟೇಜ್ ರೌಂಡ್‌ನಲ್ಲಿ ಮಲ್ಲಸಂದ್ರದ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂ ನ ಕೆ.ಅತೀತ್, ಶುಭಂ ನಂದಿ ಪ್ರಥಮ ಸ್ಥಾನ ಗಳಿಸಿದರು. ಇವರು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.ಬಿಷಪ್ ಕಾಟನ್ ಬಾಯ್ಸ ಸ್ಕೂಲ್ ಹಾಗೂ ನ್ಯಾಷನಲ್ ಪಬ್ಲಿಕ್ ಶಾಲೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡವು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.