ಶುಕ್ರವಾರ, ಜೂನ್ 18, 2021
20 °C

ಇಟಿಎಫ್ ಮೂಲಕ ರೂ3000 ಕೋಟಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇಂಡೆಕ್ಸ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಸ್ಕೀಂ’ನಡಿ (ಸೂಚ್ಯಂಕ ವಿನಿ ಮಯ ವಹಿವಾಟು ಯೋಜನೆ; ಇಟಿಎಫ್‌) ಬಿಡುಗಡೆ ಮಾಡಲಾಗಿರುವ ‘ಸಿಪಿಎಸ್‌ಇ ಇಟಿಎಫ್’(ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಇಟಿಎಫ್‌) ಮೂಲಕ ₨3000 ಕೋಟಿ ಹೂಡಿಕೆ ಸಂಗ್ರಹ ಗುರಿ ಇದೆ ಎಂದು ‘ಗೋಲ್ಡ್‌ ಮನ್‌ ಸ್ಯಾಷ್‌ ಎಎಂಸಿ’ ಹೇಳಿದೆ.ಇಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ವಿಜೇಶ್‌ ಗೊನ್ಸಾಲ್ವೆಜ್‌, ಚಿಲ್ಲರೆ ಹೂಡಿಕೆದಾರರು ಕನಿಷ್ಠ ₨5000  ಗರಿಷ್ಠ ₨2 ಲಕ್ಷ ತೊಡಗಿಸಬಹುದು. ಹೂಡಿಕೆಗೆ ಮಾ. 21 ಕಡೆದಿನ. ಏ. 11 ರಂದು ಷೇರುಪೇಟೆ ವಹಿವಾಟು ಪಟ್ಟಿಗೆ ಸೇರಲಿದೆ ಎಂದು ಹೇಳಿದರು.ಒಂದೇ ಕಂಪೆನಿ ಷೇರು ಮತ್ತು ಮ್ಯೂಚುವಲ್‌ ಫಂಡ್‌ನಂತೆ ಪೋರ್ಟ್‌ ಫೋಲಿಯೋ ಶೈಲಿ ಹೂಡಿಕೆಗೆ ‘ಇಟಿ ಎಫ್‌’ನಲ್ಲಿ ಅವಕಾಶವಿದೆ. ಒಎನ್‌ಜಿಸಿ, ಗೇಲ್‌ ಇಂಡಿಯಾ, ಆರ್‌ಇಸಿಎಲ್‌, ಕೋಲ್‌ ಇಂಡಿಯಾ, ಐಒಸಿ, ಬಿಇಎಲ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ 10 ಮಹಾರತ್ನ, ನವರತ್ನ ಮತ್ತು ಮಿನಿರತ್ನ ಕಂಪೆನಿಗಳ ಷೇರುಗಳಲ್ಲಿ ಹಣ ತೊಡಗಿ ಸುವ ಆಯ್ಕೆಯೂ ಇದೆ. ಇಂಧನ ಕ್ಷೇತ್ರ ಕಂಪೆನಿಗಳಲ್ಲಿ ಗರಿಷ್ಠ ಶೇ 59ರಷ್ಟು ಹಣ ಹೂಡಿಕೆಯಾಗಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.