ಮಂಗಳವಾರ, ಜೂನ್ 22, 2021
29 °C

ಇತರೆ ಎಟಿಎಂಗೆ ಶುಲ್ಕ: ‘ಐಬಿಎ’ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ):  ನಗರ ಪ್ರದೇಶಗ­ಳಲ್ಲಿ ಗ್ರಾಹಕರು ಇತರೆ ಬ್ಯಾಂಕುಗಳ ‘ಎಟಿಎಂ’ ಸೇವೆ ಪಡೆದುಕೊಂಡರೆ ಶುಲ್ಕ ವಿಧಿಸಲು ಬ್ಯಾಂಕುಗಳಿಗೆ ಅವ­ಕಾಶ ನೀಡ ಬೇಕು ಎಂದು ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮತ್ತೊಮ್ಮೆ ಮನವಿ ಮಾಡಿದೆ.ಸದ್ಯ ಗ್ರಾಹಕರು ತಿಂಗಳಿಗೆ ಐದು ಬಾರಿ ಮಾತ್ರ ಇತರೆ ಬ್ಯಾಂಕುಗಳ ‘ಎಟಿಎಂ’ ಸೇವೆಯನ್ನು ಉಚಿತವಾಗಿ ಪಡೆಯಬ­ಹುದು. ನಂತರದ ಪ್ರತಿ ವಹಿ ವಾಟಿಗೆ ಸರಾಸರಿ ₨15ರಂತೆ ಶುಲ್ಕ ಬೀಳುತ್ತದೆ. ಸದ್ಯ ಬ್ಯಾಂಕುಗಳೇ ಈ ಹೊರೆಯನ್ನು ಭರಿಸುತ್ತಿವೆ. ಇದರ ಬದ ಲಿಗೆ ಈ ಮೊತ್ತ­ವನ್ನು ಗ್ರಾಹಕ ರಿಂದಲೇ ವಸೂಲು ಮಾಡಲು ಅವಕಾಶ ನೀಡ ಬೇಕು ಎಂದು  ‘ಐಬಿಎ’ ಹೇಳಿದೆ.ಆದರೆ, ಗ್ರಾಮೀಣ ಪ್ರದೇಶದ ಗ್ರಾಹ­­ಕರಿಗೆ ಈಗಿರುವಂತೆಯೆ ತಿಂಗಳಿಗೆ ಐದು ಬಾರಿ ಉಚಿತವಾಗಿ ಇತರೆ ಬ್ಯಾಂಕುಗಳ ‘ಎಟಿಎಂ’ ಬಳಕೆಗೆ ಅವ­ಕಾಶ ಮುಂದು­ವರಿಸಬೇಕು ಎಂದೂ ಹೇಳಿದೆ.‘ಮಹಾ ನಗರಗಳಲ್ಲಿ­ಯಾ­ದರೂ ಇತರೆ ಬ್ಯಾಂಕ್‌ ‘ಎಟಿಎಂ’ ಬಳಕೆಗೆ ನಿರ್ದಿಷ್ಟ  ಶುಲ್ಕ ವಿಧಿಸಲು ಬ್ಯಾಂಕುಗಳಿಗೆ ಅವಕಾಶ ನೀಡಬೇ­ಕೆಂದು ಆರ್‌ಬಿಐಗೆ ಮನವಿ ಮಾಡಿರು­ವುದಾಗಿ ‘ಐಬಿಎ’ ಮುಖ್ಯ ಕಾರ್ಯ­­ನಿರ್ವಾ­ಹಕ ಅಧಿಕಾರಿ ಎಂ.ವಿ.­ಟಂಕಸಾಲೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.‘ಬೆಂಗಳೂರಿನಲ್ಲಿ ಕಳೆದ ನವೆಂಬರ್‌­ನಲ್ಲಿ ‘ಎಟಿಎಂ’ ಘಟಕದಲ್ಲಿ ಮಹಿ­ಳೆಯ ಮೇಲೆ ಅಮಾನುಷ ಹಲ್ಲೆ ನಡೆದಿತ್ತು. ಈ ಘಟನೆಯ ನಂತರ ಎಲ್ಲ ‘ಎಟಿಎಂ’ ಘಟಕಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿ­ಸುವಂತೆ ರಾಜ್ಯ ಸರ್ಕಾ­ರಗಳು ಬ್ಯಾಂಕು ಗಳಿಗೆ ಸೂಚಿ­ಸಿವೆ. ಸುಮಾರು 1.4 ಲಕ್ಷ ಎಟಿಎಂ ಘಟಕ­ಗಳಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆಯಿಂದ ಬ್ಯಾಂಕು­ಗಳಿಗೆ ತಿಂಗಳಿಗೆ ₨400 ಕೋಟಿ ಹೊರೆ ಬೀಳುತ್ತ­ದೆ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.