ಮಂಗಳವಾರ, ಜೂನ್ 22, 2021
22 °C

ಇತರ ವಿ.ವಿ.ಗಳೂ ಅನುಸರಿಸಲಿ

ಶ್ರೀನಿವಾಸ ಕಾರ್ಕಳ ಮಂಗಳೂರು Updated:

ಅಕ್ಷರ ಗಾತ್ರ : | |

ಹಿಂದೆ ಕರ್ನಾಟಕದಲ್ಲಿ ಕೆಲವೇ ಕೆಲವು ವಿಶ್ವ­ವಿದ್ಯಾಲಯಗಳಿದ್ದಾಗ ಅವು ತಮ್ಮ ಘಟಿಕೋ­ತ್ಸವ ಸಂದರ್ಭದಲ್ಲಿ ನಾಡಿನ ಕೆಲವೇ ಕೆಲವು ಮಂದಿ ನೈಜ ಸಾಧಕರನ್ನು ಗುರುತಿಸಿ, ಗೌರವ ಡಾಕ್ಟ­­ರೇಟ್‍ ಪದವಿಯ ಮೂಲಕ ಅವರನ್ನು ಗೌರವಿ­ಸುತ್ತಿದ್ದವು.  ಕಡಿಮೆ ಸಂಖ್ಯೆ ಮತ್ತು ಹೆಚ್ಚು ಅರ್ಹತೆ­ ಕಾರಣ ಅಂತಹ ಪದವಿಗಳ ಗೌರವವೂ ಹೆಚ್ಚಾಗಿತ್ತು.ಆದರೆ ರಾಜ್ಯದಲ್ಲಿ ವಿ.ವಿಗಳ ಸಂಖ್ಯೆ ಹೆಚ್ಚು­ತ್ತಿದ್ದಂತೆ ಅವುಗಳು ಕೊಡಲಾರಂಭಿಸಿದ ಗೌರವ ಡಾಕ್ಟ­­ರೇಟ್‌ಗಳ ಸಂಖ್ಯೆಯೂ ಆಕ್ಷೇ­ಪಾರ್ಹ ರೀತಿ­ಯಲ್ಲಿ ಏರಿಕೆ ಕಂಡಿತು. ಪಾತ್ರರ ಜತೆಗೆ ಅಪಾತ್ರರ ಹೆಸರುಗಳೂ ಈ ಪದವಿ ಪಟ್ಟಿಯಲ್ಲಿ ಸೇರಲಾ­ರಂಭಿ­ಸಿದವು. ಸಮಾಜಸೇವೆ ಎಂಬ ವರ್ಗದ ಅಡಿಯಲ್ಲಿ ರಾಜಕೀಯ ಪುಢಾರಿಗಳು, ಗುತ್ತಿಗೆದಾರರು, ಮಠಾಧೀಶರು, ಕಲೆ ಎಂಬ ವರ್ಗದ ಅಡಿಯಲ್ಲಿ ಸಿನಿಮಾ ನಟರು ಕೂಡಾ ಈ ಪದವಿಗೆ ಭಾಜನರಾಗುವ ಮೂಲಕ ಒಟ್ಟಾರೆ ಗೌರವ ಡಾಕ್ಟ­­ರೇಟ್‍ ಪದವಿಗಳ ಗೌರವವೇ ಮಣ್ಣುಪಾಲಾಗಲಾರಂಭಿಸಿದ್ದು ಈಗ ಇತಿಹಾಸ.ಇಂತಹ ಹೊತ್ತಿನಲ್ಲಿ ಮಂಗಳೂರು ವಿ.ವಿ. ಈ ಬಾರಿ ಯಾರೊಬ್ಬರಿಗೂ ಗೌರವ ಡಾಕ್ಟ­­ರೇಟ್‍ ಪದವಿ ನೀಡದೆ ಒಂದು ಅತ್ಯುತ್ತಮ ಮೇಲ್ಪಂಕ್ತಿ­ಯನ್ನು ಹಾಕಿಕೊಟ್ಟಿದೆ. ಇದನ್ನು ರಾಜ್ಯದ ಇತರ ವಿಶ್ವವಿದ್ಯಾಲಯಗಳು ಏಕೆ ಅನುಸರಿಸಬಾರದು?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.