ಗುರುವಾರ , ಫೆಬ್ರವರಿ 25, 2021
23 °C

ಇತಿಹಾಸದ ಪುಟಗಳಲ್ಲಿ ಲಕ್ಷ್ಮಿ

ಸಂತೋಷ ಚಿನಗುಡಿ Updated:

ಅಕ್ಷರ ಗಾತ್ರ : | |

ಇತಿಹಾಸದ ಪುಟಗಳಲ್ಲಿ ಲಕ್ಷ್ಮಿ

‘ನೋಡಪ್ಪ ನನ್ನ ಮಗಳು ಮಹಾಲಕ್ಷ್ಮಿ ಇದ್ದಂಗ್‌ ಅವ್ಳೆ...’ ಎನ್ನುವ ಆನಂದ ಎಲ್ಲ ತಂದೆ– ತಾಯಂದಿರ ಬಾಯಲ್ಲಿ ಕೇಳಿ ಬರುತ್ತದೆ. ಯಾರಿಗಾದರೂ ಹೆಣ್ಣು ಮಗು ಹುಟ್ಟಿದ ತಕ್ಷಣ ‘ಓಹ್‌... ನಮ್ಮ ಮನೆಗೆ ಸಾಕ್ಷಾತ್‌ ಮಹಾಲಕ್ಷ್ಮಿ ಬಂದಳು’ ಎಂದು ಹರ್ಷಪಡುವ ಅಪ್ಪಂದಿರ ಸಂಖ್ಯೆಯೂ ಕಡಿಮೆಯಿಲ್ಲ.ಹೆಣ್ಣನ್ನು ಮಹಾಲಕ್ಷ್ಮಿ ಎಂದೇ ಭಾವಿಸುತ್ತೇವೆ. ಹೆಣ್ಣುಮಕ್ಕಳಿಗೂ ಲಕ್ಷ್ಮಿ ಎಂದರೆ ಎಲ್ಲಿಲ್ಲದ ಭಕ್ತಿ. ಅದರಲ್ಲೂ ವರಮಹಾಲಕ್ಷ್ಮಿ ವ್ರತ ಮಾಡುವುದು ವರ್ಷಕ್ಕೊಮ್ಮೆ ಬರುವ ಭಾಗ್ಯ ಎಂದೇ ಗೃಹಿಣಿಯರು ಪರಿಗಣಿಸುತ್ತಾರೆ.ಇಷ್ಟೆಲ್ಲ ಪೀಠಿಕೆ ಹೇಳಲು ಕಾರಣವಿದೆ. ಆಗಸ್ಟ್‌ 12ಕ್ಕೆ ಮತ್ತೆ ವರಮಹಾಲಕ್ಷ್ಮಿ ವ್ರತಾಚರಣೆ ದಿನ ಬಂದಿದೆ. ಈ ಬಾರಿಯ ಹಬ್ಬದ ತಯಾರಿ ಈಗಿನಿಂದಲೇ ನಡೆದಿದೆ. ವರವನ್ನು ಕೊಡುವವಳೇ ‘ವರ ಮಹಾಲಕ್ಷ್ಮಿ’.ರಾಜ್ಯವೂ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡುಗಳಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಉಳಿದ ಕಡೆಗಳಲ್ಲಿ ದೀಪಾವಳಿ ಹಾಗೂ ಶರದ್‌ ಪೂರ್ಣಿಮೆಯಂದು ಲಕ್ಷ್ಮಿ ಆರಾಧನೆ ನಡೆಯುತ್ತದೆ. ಶ್ರಾವಣ ಹುಣ್ಣಿಮೆಯ ಹಿಂದಿನ ಶುಕ್ರವಾರವೇ ಈ ಹಬ್ಬ. ಈ ವ್ರತಕ್ಕೆ ಜಾತಿ ಭೇದವಿಲ್ಲ. ಮನೆಯಲ್ಲೇ ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ. ಕೆಲವು ಮನೆಗಳಲ್ಲಿ ಕಾಣಿಸುವ ಆಕರ್ಷಕ ಮಂಟಪ ಗೃಹಿಣಿಯರ ಕಲಾಪ್ರಜ್ಞೆಯನ್ನು ಸಾರಿ ಹೇಳುತ್ತದೆ.ವರಮಹಾಲಕ್ಷ್ಮಿ ಹಬ್ಬದ ಮಹತ್ವದ ಬಗ್ಗೆ ಈಶ್ವರನು ಪಾರ್ವತಿಗೆ ಹೇಳಿದ್ದಾಗಿ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ. ಈ ವ್ರತ ಮಾಡಿದವರಿಗೆ ಧನ, ಧಾನ್ಯ, ಆಯಸ್ಸು, ಆರೋಗ್ಯ, ಐಶ್ವರ್ಯ, ಸಂತಾನ ಹಾಗೂ ಸೌಭಾಗ್ಯ ಲಭಿಸುವುದೆಂದು ಶಿವ ತಿಳಿಸಿದ್ದಾನೆ.ಪುರಾತನ ನಾಣ್ಯಗಳ ಅಧ್ಯಯನದಿಂದ ಕ್ರಿ.ಪೂ. 1ನೇ ಶತಮಾನದಿಂದಲೂ ದೇಶದಲ್ಲಿ ಲಕ್ಷ್ಮಿಯ ಆರಾಧನೆ ಇರುವುದನ್ನು ಕಾಣಬಹುದು. ಕ್ರಿ.ಪೂ.1ನೇ ಶತಮಾನದ ಗಾಂಧಾರ ಸಾಮ್ರಾಜ್ಯದ ನಾಣ್ಯಗಳಲ್ಲಿ ಲಕ್ಷ್ಮೀದೇವಿಯನ್ನು ಕಾಣಬಹುದು. 2ನೇ ಶತಮಾನದ ಬೃಹತ್‌ ಸ್ತೂಪದಲ್ಲಿ ಲಕ್ಷ್ಮೀದೇವಿ ಇದ್ದಾಳೆ. 3ನೇ ಶತಮಾನದ ಸಾಂಚಿ ಸ್ತೂಪದಲ್ಲಿ ಗಜಲಕ್ಷ್ಮಿಯ ಕೆತ್ತನೆ ಇದೆ. ಗುಪ್ತರ ಕಾಲದ ನಾಣ್ಯಗಳಲ್ಲೂ ಲಕ್ಷ್ಮೀದೇವಿ ವಿರಾಜಮಾನಳು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.