ಶುಕ್ರವಾರ, ಜನವರಿ 24, 2020
28 °C

ಇತಿಹಾಸ ಕರ್ನಾಟಕ ತಂಡದ ಪರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಮತ್ತು ಪಂಜಾಬ್‌ ನಡುವೆ ಈ ವರೆಗೆ ನಡೆದ ರಣಜಿ ಪಂದ್ಯಗಳ ಫಲಿತಾಂಶವನ್ನು ಗಮನಿಸಿ ದರೆ ರಾಜ್ಯ ತಂಡವೇ ಮೇಲುಗೈ ಸಾಧಿಸಿದ್ದು ಕಂಡು ಬರುತ್ತದೆ.ಉಭಯ ತಂಡಗಳು ಈ ವರೆಗೆ ಒಟ್ಟು ಏಳು ಬಾರಿ ಮುಖಾಮುಖಿ ಯಾಗಿದ್ದು ಕರ್ನಾಟಕ ನಾಲ್ಕು ಬಾರಿ ಜಯ ಸಾಧಿಸಿದೆ.1982ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್‌ ಫೈನಲ್ ಹಂತದ ಪಂದ್ಯದಲ್ಲಿ ಕರ್ನಾಟಕ ಜಯ ಸಾಧಿಸಿತ್ತು. 1998ರಲ್ಲಿ ಬೆಂಗಳೂರಿ ನಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿದ್ದ ರಾಜ್ಯ ತಂಡ 1999ರಲ್ಲಿ ಅಮೃತಸರದಲ್ಲಿ ನಡೆದ ಸೆಮಿ ಫೈನಲ್‌ ಹಂತದ ಪಂದ್ಯದಲ್ಲೂ ಗೆಲುವು ದಾಖಲಿಸಿತ್ತು. 2010ರಲ್ಲಿ ಮೊಹಾಲಿಯಲ್ಲೂ ಕರ್ನಾಟಕ ಜಯ ಗಳಿಸಿತ್ತು. 1995ರಲ್ಲಿ ಮೊಹಾಲಿಯಲ್ಲಿ ಪಂಜಾಬ್‌ ಪ್ರಥಮ ಇನಿಂಗ್ಸ್‌ ಲೀಡ್‌ ಪಡೆದು ಕೊಂಡಿದ್ದರೆ 2009ರಲ್ಲಿ ಮೈಸೂರಿ ನಲ್ಲಿ ನಡೆದ ಕ್ವಾರ್ಟರ್‌ ಫೈನಲ್‌  ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ ಲೀಡ್‌ ಪಡೆದಿತ್ತು. 2011 ರಲ್ಲಿ ಬೆಂಗಳೂರಿ ನಲ್ಲಿ  ಪಂಜಾಬ್‌  ಇನಿಂಗ್ಸ್‌ ಲೀಡ್‌ ಗಳಿಸಿತ್ತು.

ಪ್ರತಿಕ್ರಿಯಿಸಿ (+)